ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿರಿಯಾಣ ಚೆಕ್‌ಪೋಸ್ಟ್: ₹1.35 ಲಕ್ಷ ಮೊತ್ತದ ಸಿಗರೇಟು, ತಂಬಾಕು ಜಪ್ತಿ

Published 4 ಏಪ್ರಿಲ್ 2024, 15:55 IST
Last Updated 4 ಏಪ್ರಿಲ್ 2024, 15:55 IST
ಅಕ್ಷರ ಗಾತ್ರ

ಚಿಂಚೋಳಿ: ತಾಂಡೂರಿನಿಂದ ಚಿಂಚೋಳಿ ಕಡೆಗೆ ವಾಹನದಲ್ಲಿ ತಾಂಡೂರಿನ ನಂದಕುಮಾರ ರಾಮಯ್ಯ ಎಂಬುವವರು ₹1,35,375 ಮೊತ್ತದ ವಿವಿಧ ಸಿಗರೇಟು ಹಾಗೂ ತಂಬಾಕು ಸಾಗಣೆ ಮಾಡುವಾಗ ಮಿರಿಯಾಣ ಚೆಕ್‌ಪೋಸ್ಟ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ದಾಖಲೆ ಇಲ್ಲದೇ ಸಾಗಿಸುತ್ತಿದ್ದಾಗ ಚೆಕ್‌ಪೋಸ್ಟ್ ಸಿಬ್ಬಂದಿ ತುಕ್ಕಪ್ಪ ತಪಾಸಣೆ ನಡೆಸಿ ಮಿರಿಯಾಣ ಪೊಲೀಸರಿಗೆ ದೂರು ನೀಡಿದ್ದಾರೆ. ಮಿರಿಯಾಣ ಠಾಣೆಯ ‍ಪಿಎಸ್‌ಐ ಶಿವರಾಜ ಪಾಟೀಲ ಪ್ರಕರಣ ದಾಖಲಿಸಿಕೊಂಡಿದ್ದಾರೆ.

₹77,535 ಮೌಲ್ಯದ ಅಕ್ರಮ ಮದ್ಯ ಜಪ್ತಿ

ಚಿಂಚೋಳಿ: ತಾಲ್ಲೂಕಿನ ಕಲ್ಲೂರು ರೋಡ್ ಗ್ರಾಮದಿಂದ ಸೋಮಲಿಂಗದಳ್ಳಿಗೆ ದ್ವಿಚಕ್ರ ವಾಹನದ ಮೇಲೆ 5.850 ಲೀಟರ್ ದೇಶಿ ಮದ್ಯ ಹಾಗೂ 7.920 ಲೀಟರ್ ಬಿಯರ್ ಅಕ್ರಮವಾಗಿ ಸಾಗಣೆ ಮಾಡುವಾಗ ದಾಳಿ ನಡೆಸಿ ಜಪ್ತಿ ಮಾಡಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಸಿಪಿಐ ರಾಹುಲ್ ನಾಯಕ ತಿಳಿಸಿದ್ದಾರೆ.

ಅಂದಾಜು ₹77,535 ಮೌಲ್ಯದ ಮದ್ಯ ವಶಪಡಿಸಿಕೊಂಡು ಆರೋಪಿ ಸೋಮಲಿಂಗದಳ್ಳಿ ಗ್ರಾಮದ ಮಂಜುನಾಥ ಹಣಮಂತಯ್ಯ ಗುತ್ತೇದಾರ ಅವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಬಕಾರಿ ನಿರೀಕ್ಷಕ ಮಹಮದ್ ಹುಸೇನಸಾಬ್, ಅಬಕಾರಿ ಕಾನ್‌ಸ್ಟೇಬಲ್‌ ಗೌತಮ ಬುದ್ಧ, ಪುಂಡಲೀಕ, ಸಿದ್ಧಾರೂಢ ಕಲ್ಲಯ್ಯ ಮಠಪತಿ ಹಾಗೂ ವಾಹನ ಚಾಲಕ ಗುರುನಾಥ ಕಾರ್ಯಾಚರಣೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT