ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಎನ್‌ವಿ ಕಾಲೇಜು ಚಿತ್ರಕಲಾ ಪ್ರದರ್ಶನಕ್ಕೆ ಚಾಲನೆ

Published 19 ಡಿಸೆಂಬರ್ 2023, 14:50 IST
Last Updated 19 ಡಿಸೆಂಬರ್ 2023, 14:50 IST
ಅಕ್ಷರ ಗಾತ್ರ

ಕಲಬುರಗಿ: ನಗರದ ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯದಲ್ಲಿ ಚಿತ್ರಕಲಾ ವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನಕ್ಕೆ ನೂತನ ವಿದ್ಯಾಲಯ ಸಂಸ್ಥೆಯ ಅಧ್ಯಕ್ಷ ಗೌತಮ ಜಹಗೀರದಾರ ಮಂಗಳವಾರ ಚಾಲನೆ ನೀಡಿದರು.

‘ನಮ್ಮ ವಿದ್ಯಾರ್ಥಿಗಳು ಹೊರ ರಾಜ್ಯದಲ್ಲೂ ಚಿತ್ರಕಲಾ ಪ್ರದರ್ಶನದಲ್ಲಿ ಭಾಗವಹಿಸುವಂತಾಗಲಿ’ ಎಂದರು.

ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್‌ ಎ.ದೇಶಮುಖ ಅವರು ವಿದ್ಯಾರ್ಥಿಗಳ ಕಲೆಯನ್ನು ಪ್ರಶಂಸಿದರು.

ಕಾಲೇಜಿನ ಪ್ರಾಚಾರ್ಯ ಶ್ರೀಕಾಂತ ಎಸ್.ಏಖೇಳಿಕರ, ಉಪ ಪ್ರಾಚಾರ್ಯ ದಯಾನಂದ ಶಾಸ್ತ್ರಿ, ವಿಭಾಗದ ಮುಖ್ಯಸ್ಥ ಜಿತೇಂದ್ರ ಕೊಥಳಿಕರ, ಉಪನ್ಯಾಸಕರಾದ ನಾಗರಾಜ ಕುಲಕರ್ಣಿ, ರಾಜಕುಮಾರ ಕಾಳೆ, ಐಕ್ಯುಎಸಿ ಸಂಯೋಜಕ ಗೋವಿಂದ ಪೂಜಾರ ಪಾಲ್ಗೊಂಡಿದ್ದರು. ವಿಷ್ಣು ಗುಂಡಗುರ್ಕಿ ನಿರೂಪಿಸಿದರು.

ಪ್ರದರ್ಶನದಲ್ಲಿ ಶಾಂಭವಿ, ತ್ರಿವೇಣಿ, ವೇದಶ್ರೀ, ವೀಣಾ, ರಕ್ಷಿತಾ, ಸೌಜನ್ಯ, ಸುನಯನಾ, ಮದಿಯಾ, ದಾನಮ್ಮ, ಭಾಗ್ಯಶ್ರೀ, ತನುಜಾ, ಶಿವಕುಮಾರ ಸೇರಿ ಒಟ್ಟು 12 ವಿದ್ಯಾರ್ಥಿಗಳು ರಚಿಸಿದ ವಿಭಿನ್ನ ಶೈಲಿಯ 48 ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಚಿತ್ರಕಲಾ ಪ್ರದರ್ಶನವನ್ನು ಡಿ.21ರವರೆಗೆ ಬೆಳಿಗ್ಗೆ 11ರಿಂದ ಸಂಜೆ 5ರವರೆಗೆ ವೀಕ್ಷಿಸಬಹುದು. ಕಲಾಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಎಂದು ವಿಭಾಗದ ಮುಖ್ಯಸ್ಥರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT