ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ | ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ: ಪ್ರಯಾಣಿಕರು ಪಾರು

Published 8 ಮೇ 2024, 15:19 IST
Last Updated 8 ಮೇ 2024, 15:19 IST
ಅಕ್ಷರ ಗಾತ್ರ

ಕಮಲಾಪುರ: ಪಟ್ಟಣ ಹೊರವಲಯದ ಚಾರಕಮಾನ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಪ್ರಯಾಣಿಕರು ಪಾರಾಗಿದ್ದಾರೆ.

ಹೈದರಾಬಾ್‌ನ ಬಂಜಾರ ಹಿಲ್ಸ್‌ ನಿವಾಸಿ ಮೊಹಮ್ಮದ್ ಜಲೀಲ್ ಅವರಿಗೆ ಸೇರಿದ್ದ ಫೋರ್ಡ್ ಫೀಸ್ಟಾ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಎರಡು ದಿನಗಳ ಹಿಂದೆ ಕಲಬುರಗಿಗೆ ಆಗಮಿಸಿದ್ದ ಇವರು ಚಾಲಕ ಸೇರಿ ಐವರು ಕೂಡಿ ಹೈದರಾಬಾದ್‌ಗೆ ತೆರಳುತ್ತಿದ್ದರು.

ಕಲಬುರಗಿಯ ಮಿಲ್ಲತ್‌ ನಗರದ ಮೊಹಮ್ಮದ್ ಖದೀರ್ ಪಾಷಾ ಹಾಗೂ ಸಂಗಡಿಗರು ಸೌದಿಗೆ ತೆರಳುತ್ತಿದ್ದು ಅವರನ್ನು ಹೈದರಾಬಾದ್ ವಿಮಾನ ನಿಲ್ದಾಣ ಕರೆದೊಯ್ದು ಬಿಡಬೇಕಿತ್ತು. ಮಾರ್ಗಮಧ್ಯದ ಕಮಲಾಪುರ ಬಳಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಎಲ್ಲರೂ ಕಾರಿನಿಂದ ಕೆಳಗಿಳಿದಿದ್ದಾರೆ.

ಈ ಸ್ಥಳದಿಂದ ಸುಮಾರು 50 ಮೀಟರ ದೂರದಲ್ಲಿ ಕಳೆದ ವರ್ಷ ಬಸ್‌ಗೆ ಬೆಂಕಿ ಹೊತ್ತಿಕೊಂಡು 7 ಜನ ಮೃತಪಟ್ಟಿದ್ದರು.

ಕಮಲಾಪುರ ಬಳಿ ಕಾರಿಗೆ ಬೆಂಕಿಹೊತ್ತಿಕೊಂಡಿರುವುದು
ಕಮಲಾಪುರ ಬಳಿ ಕಾರಿಗೆ ಬೆಂಕಿಹೊತ್ತಿಕೊಂಡಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT