ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ | ಬಾಲಕಿಯರ ಹಾಸ್ಟೆಲ್‌ ಸ್ನಾನಗೃಹದಲ್ಲಿ ವೈಫೈ ಕ್ಯಾಮೆರಾ: ಬಂಧನ

Published 20 ಡಿಸೆಂಬರ್ 2023, 16:16 IST
Last Updated 20 ಡಿಸೆಂಬರ್ 2023, 16:16 IST
ಅಕ್ಷರ ಗಾತ್ರ

ಜೇವರ್ಗಿ (ಕಲಬುರಗಿ ಜಿಲ್ಲೆ): ಪಟ್ಟಣದ ಬಾಡಿಗೆ ಕಟ್ಟಡದಲ್ಲಿದ್ದ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ಸ್ನಾನಗೃಹದಲ್ಲಿ ವೈಫೈ ಕ್ಯಾಮೆರಾ ಇಟ್ಟು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣ ಮಾಡಲು ಯತ್ನಿಸಿದ ಆರೋಪಿಯನ್ನು ಜೇವರ್ಗಿ ಠಾಣೆ ಪೊಲೀಸರು ಬುಧವಾರ ಬಂಧಿಸಿದರು.

ಮಂದೇವಾಲ ಗ್ರಾಮದ ನಿವಾಸಿ ಸಲೀಂ ಅಲಿ ಬಾಷಾ ಬಂಧಿತ ಆರೋಪಿ. ಪಟ್ಟಣದಲ್ಲಿ ಬೆಳ್ಳುಳ್ಳಿ ವ್ಯಾಪಾರ ಮಾಡುತ್ತಿದ್ದ ಈತ, ಶಾಂತನಗರ ಬಡಾವಣೆಯ ಬಾಡಿಗೆಯ ಮನೆಯಲ್ಲಿ ಪತ್ನಿ ಹಾಗೂ ಮೂವರು ಮಕ್ಕಳೊಂದಿಗೆ ವಾಸವಾಗಿದ್ದ.

ಹಾಸ್ಟೆಲ್ ಪಕ್ಕದ ಬಾಡಿಗೆ ಮನೆಯಿಂದ ಹಾಸ್ಟೆಲ್‌ನ ಸ್ನಾನಗೃಹದ ಕಿಟಕಿಗೆ ಸಲೀಂ, ಪೈಪ್‌ ಮೂಲಕ ವೈಫೈ ಕ್ಯಾಮೆರಾ ಇರಿಸಿ ಸ್ನಾನಗೃಹದೊಳಗಿನ ದೃಶ್ಯಗಳನ್ನು ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಣಕ್ಕೆ ಮುಂದಾಗಿದ್ದ. ನಸುಕಿನ ಜಾವದಲ್ಲಿ ಕಿಟಕಿಯಲ್ಲಿ ವಸ್ತುವೊಂದು ಮಿಂಚುವುದನ್ನು ಕಂಡ ವಿದ್ಯಾರ್ಥಿನಿಯರಿಗೆ ಶಂಕೆ ಬಂದು, ನಿಲಯದ ಮೇಲ್ವಿಚಾರಕರ ಗಮನಕ್ಕೆ ತಂದರು ಎಂದು ಪೊಲೀಸರು ತಿಳಿಸಿದರು.

ಕಿಟಕಿ ಬಳಿ ಬಂದು ತಪಾಸಣೆ ಮಾಡಿದಾಗ, ವೈಫೈ ಕ್ಯಾಮೆರಾ ಇರಿಸಿದ್ದು ಗೊತ್ತಾಯಿತು. ಮೇಲ್ವಿಚಾರಕರು ಕ್ಯಾಮೆರಾ ಇರಿಸಿದ ಆರೋಪಿಯನ್ನು ಥಳಿಸಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಸ್ಥಳಕ್ಕೆ ಸಿಪಿಐ ರಾಜೇಸಾಬ್ ನದಾಫ್, ಪಿಎಸ್‌ಐ ಸುರೇಂದ್ರ ಕುಮಾರ ಚವ್ಹಾಣ್ ಬಂದು ಪರಿಶೀಲಿಸಿದ್ದಾರೆ. ಕೃತ್ಯಕ್ಕೆ ಬಳಸಿದ ಸಾಮಗ್ರಿಯನ್ನು ವಶಕ್ಕೆ ಪಡೆದಿದ್ದಾರೆ.

ಬಾಲಕಿಯರ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಇರಿಸಿದ್ದ ವೈಫೈ ಕ್ಯಾಮೆರಾ
ಬಾಲಕಿಯರ ಹಾಸ್ಟೆಲ್‌ನ ಸ್ನಾನಗೃಹದಲ್ಲಿ ಇರಿಸಿದ್ದ ವೈಫೈ ಕ್ಯಾಮೆರಾ
ಸಲೀಂ ಅಲಿ ಬಾಷಾ
ಸಲೀಂ ಅಲಿ ಬಾಷಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT