ಜಿಎಸ್‌ಟಿ; ತಪ್ಪಿದ ಮಾಮೂಲಿ ತಾಪತ್ರಯ!

7
ಮೂರು ಚೆಕ್ ಪೋಸ್ಟ್ ರದ್ದು

ಜಿಎಸ್‌ಟಿ; ತಪ್ಪಿದ ಮಾಮೂಲಿ ತಾಪತ್ರಯ!

Published:
Updated:
Deccan Herald

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶದ ರಾಯಚೂರು ಜಿಲ್ಲೆಯ ಲಿಂಗಸುಗೂರು, ಕಲಬುರ್ಗಿಯ ಆಳಂದ ಮತ್ತು ಹುಮನಾಬಾದ್ ರಸ್ತೆಗಳಲ್ಲಿದ್ದ ಮೂರು ಚೆಕ್‌ ಪೋಸ್ಟ್‌ಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೂ ಮುನ್ನವೇ ರದ್ದುಪಡಿಸಲಾಗಿದೆ.

‘ಚೆಕ್‌ಪೋಸ್ಟ್ ರದ್ದುಪಡಿಸಿರುವುದರಿಂದ ಗಂಟೆಗಟ್ಟಲೆ ಕಾಯುವುದು, ಮಾಮೂಲಿ ಕೊಡುವುದು ತಪ್ಪಿದಂತಾಗಿದೆ’ ಎಂದು ಲಾರಿ ಚಾಲಕರು ಖುಷಿಯಿಂದ ಹೇಳುತ್ತಾರೆ.

‘ಮೊಬೈಲ್ ತಪಾಸಣೆ ವ್ಯವಸ್ಥೆಯಲ್ಲಿ ಮುಂಚೆಯೂ ಇತ್ತು, ಈಗಲೂ ಇದೆ. ಸರಕು ಮಾರಾಟ ಮಾಡುವವವರು ಅಥವಾ ಖರೀದಿಸುವವರು ಇ–ವೇ ಬಿಲ್‌ನಲ್ಲಿ ನೋಂದಣಿ ಮಾಡಿರಬೇಕು ಮತ್ತು ಇನ್‌ವಾಯಿಸ್‌ ಹೊಂದಿರಬೇಕು. ಇನ್‌ವಾಯಿಸ್, ಇ–ವೇ ಬಿಲ್ ನೋಂದಣಿ ಇಲ್ಲದಿದ್ದರೆ ಅಧಿಕಾರಿಗಳು ದಂಡ ವಿಧಿಸುತ್ತಾರೆ’ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ಹೇಳುತ್ತವೆ.

‘ಚೆಕ್‌ ಪೋಸ್ಟ್‌ಗಳನ್ನು ರದ್ದು ಮಾಡಿರುವುದರಿಂದ ಲಾರಿ ಮಾಲೀಕರು ಮತ್ತು ಚಾಲಕರಿಗೆ ಅನುಕೂಲವಾಗಿದೆ. ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲುವುದು ತಪ್ಪಿದೆ. ಜಿಎಸ್‌ಟಿ ಜಾರಿಯಿಂದ ವಾಣಿಜ್ಯ ತೆರಿಗೆ ಇಲಾಖೆಗೆ ವಾರ್ಷಿಕ ₹700ರಿಂದ ₹1 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದನ್ನು ಕೇಂದ್ರ ಸರ್ಕಾರ ಭರಿಸುತ್ತದೆ’ ಎಂಬುದು ಮೂಲಗಳ ವಿವರಣೆ.

‘ವರ್ಷದ ಹಿಂದೆ ರಾಯಚೂರು ಹೊರವಲಯದ ಸಾತ್‌ಮೈಲಿ ಕ್ರಾಸ್‌ನಲ್ಲಿ ಲಾರಿಗಳು ಸರದಿಯಲ್ಲಿ ನಿಂತುಕೊಳ್ಳುತ್ತಿದ್ದವು. ವಾಣಿಜ್ಯ ತೆರಿಗೆ ಇಲಾಖೆ ಸಿಬ್ಬಂದಿ ಪ್ರತಿ ಲಾರಿಯನ್ನು ತಪಾಸಣೆ ಮಾಡಿ ಸರಕು ಮತ್ತು ಬಿಲ್‌ಗಳನ್ನು ಪರಿಶೀಲಿಸುತ್ತಿದ್ದರು. ದಾಖಲೆಗಳಿಲ್ಲದೆ ಸರಕುಗಳನ್ನು ಸಾಗಿಸಿದರೆ ದಂಡ ವಿಧಿಸುತ್ತಿದ್ದರು. ಕೆಲವು ಸಿಬ್ಬಂದಿ ಲಂಚ ಪಡೆಯುತ್ತಿದ್ದರು. ಈಗ ಚಿತ್ರಣ ಸಂಪೂರ್ಣ ಬದಲಾಗಿದೆ’ ಎಂದು ಗದ್ವಾಲ್‌ ಲಾರಿ ಚಾಲಕ ಮುರುಗನ್‌ ಹೇಳುತ್ತಾರೆ.

 ಜಿಎಸ್‌ಟಿ ಜಾರಿಗೆ ಬಂದ ಬಳಿಕ ಚೆಕ್‌ಪೋಸ್ಟ್‌ನಲ್ಲಿ ಲಾರಿಗಳನ್ನು ನಿಲ್ಲಿಸುವುದು ತಪ್ಪಿದೆ. ಪೊಲೀಸರು ಅಲ್ಲಲ್ಲಿ ತಪಾಸಣೆ ಮಾಡುತ್ತಾರೆ. ದಾಖಲೆಗಳನ್ನು ತೋರಿಸಿದರೆ ತೊಂದರೆ ಕೊಡುವುದಿಲ್ಲ.
ನಾಗೇಶ, ಲಾರಿ ಚಾಲಕ, ಹೈದರಾಬಾದ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !