ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂಚೋಳಿ: ಗುಡುಗು ಮಿಂಚಿನೊಂದಿಗೆ ಜೋರು ಮಳೆ

Published 4 ಜೂನ್ 2024, 16:11 IST
Last Updated 4 ಜೂನ್ 2024, 16:11 IST
ಅಕ್ಷರ ಗಾತ್ರ

ಚಿಂಚೋಳಿ: ತಾಲ್ಲೂಕಿನ ವಿವಿಧೆಡೆ ಮಂಗಳವಾರ ಜೋರು ಮಳೆಯಾಗಿದೆ. ಗುಡುಗು ಮಿಂಚಿನ ಅಬ್ಬರದೊಂದಿಗೆ ಆರಿದ್ರಾ ಮಳೆ ರೌದ್ರಾವತಾರ ತಾಳಿದ್ದು ಎಲ್ಲೆಡೆ ಬಿರುಸಿನ ಮಳೆಯಾಗಿದೆ.

ತಾಲ್ಲೂಕಿನ ಚಂದನಕೇರಾ, ಕೊಟಗಾ, ಖಾನಾಪುರ, ಭೂಂಯಾರ, ಸಲಗರ ಬಸಂತಪುರ, ಚಿಂಚೋಳಿ- ಚಂದಾಪುರ ಚಿಮ್ಮಾಈದಲಾಯಿ, ಪೋಲಕಪಳ್ಳಿ, ಚಿಮ್ಮನಚೋಡ, ಕನಕಪುರ, ಗೌಡನಹಳ್ಳಿ, ಹಸರಗುಂಡಗಿ, ದೇಗಲಮಡಿ, ಐನೋಳ್ಳಿ ಮೊದಲಾದ ಕಡೆ ಮಳೆಯಾಗಿದೆ. ಗುಡುಗು ಮಿಂಚಿನಿಂದ ಮಳೆ ಸುರಿಯುತ್ತಿರುವುದರಿಂದ ಪಟ್ಟಣದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

ಬಿತ್ತನೆಗೆ ಪೂರಕ: ತಾಲ್ಲೂಕಿನ ವಿವಿಧೆಡೆ ಬಿರುಗಾಳಿಯೊಂದಿಗೆ ಜೋರು‌ ಮಳೆಯಾಗಿದ್ದು ರೋಹಿಣಿ ರೈತರ ಕೈ ಹಿಡಿದಿದೆ. ಇದರಿಂದ ಮುಂಗಾರು ಬಿತ್ತನೆಗೆ ಪೂರಕವಾಗಿದೆ. ರೈತರು ಮಳೆಗಾಗಿ ಮುಗಿಲು ನೋಡುತ್ತಿದ್ದರು. ಅದರಂತೆ ಮಳೆ ಸುರಿಯುವ ಮೂಲಕ ಕೃಷಿ ಚಟುವಟಿಕೆ ಚುರುಕುಗೊಳ್ಳುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT