ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬಿ: ಸಿದ್ಧಲಿಂಗ ಸ್ವಾಮೀಜಿ

Published 20 ಫೆಬ್ರುವರಿ 2024, 4:18 IST
Last Updated 20 ಫೆಬ್ರುವರಿ 2024, 4:18 IST
ಅಕ್ಷರ ಗಾತ್ರ

ಚಿತ್ತಾಪುರ: ‘ಬದುಕಿನ ಒತ್ತಡದಲ್ಲಿಯೂ ಮನೆಯಲ್ಲಿ ಪಾಲಕರು ಮತ್ತು ಶಾಲೆಯಲ್ಲಿ ಶಿಕ್ಷಕರು ಶಿಕ್ಷಣಕ್ಕೆ ಪೂರಕವಾಗಿ ಮಕ್ಕಳಿಗೆ ಆತ್ಮ ವಿಶ್ವಾಸ ತುಂಬುವ ಕೆಲಸ ಮಾಡಬೇಕು. ಅಂದಾಗ ಮಾತ್ರ ಮಕ್ಕಳ ಕಲಿಕೆಯ ಗುಣಮಟ್ಟ ಸುಧಾರಣೆಯಾಗುತ್ತದೆ’ ಎಂದು ರಾವೂರಿನ ಸಿದ್ಧಲಿಂಗ ಸಂಸ್ಥಾನ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಈಚೆಗೆ ನಡೆದ ಪ್ರಾರ್ಥನಾ ಪೂರ್ವ ಪ್ರಾಥಮಿಕ ಹಾಗೂ ವೀರಭದ್ರೇಶ್ವರ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ 6ನೇ ಶಾಲಾ ವಾರ್ಷಿಕೋತ್ಸವ ಹಾಗೂ ಮಕ್ಕಳ ಹಬ್ಬ-2024 ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಕೇವಲ ಅಂಕಗಳನ್ನು ಪಡೆಯಲೆಂದು ಮಕ್ಕಳನ್ನು ಪುಸ್ತಕದ ಹುಳುವನ್ನಾಗಿ ಮಾಡಬಾರದು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಬೇಕು ಎಂದರು.

ಸಾಹಿತಿ ಶಿವರಂಜನ್ ಸತ್ಯಂಪೇಟ್ ಮಾತನಾಡಿ, ‘ಮಕ್ಕಳಿಗೆ ಮಹಾಪುರುಷರ ಜೀವನ, ಆದರ್ಶ, ಸಮಾಜಕಾರ್ಯ ಕುರಿತು ಮನವರಿಕೆ ಮಾಡಿಕೊಡಬೇಕು. ಸಂಸ್ಕಾರಯುತ ಶಿಕ್ಷಣ ಮಕ್ಕಳನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತದೆ’ ಎಂದು ಹೇಳಿದರು.

ಡಿವೈಎಸ್‌ಪಿ ಶಂಕರಗೌಡ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ವಿಶ್ವಗುರು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರೆಡ್ಡಿ ಪಾಟೀಲ್ ಕರದಾಳ, ಶ್ರಾವಣಿ ಮಹೇಶ ಕೊಟ್ರಣ್ಣನವರ್ ಮಾತನಾಡಿದರು. ಸಿ.ಆರ್.ಪಿ ತಮ್ಮನ್ನಾ ಕೌಸರ್, ಕಾಂಗ್ರೆಸ್ ಮೈನಾರಿಟಿ ಅಧ್ಯಕ್ಷ ಮುಕ್ತಾರ್ ಪಟೇಲ್, ಬಂಜಾರ ಸಮಾಜದ ಮುಖಂಡ ಗೋಪಾಲ ರಾಠೋಡ ವೇದಿಕೆಯಲ್ಲಿದ್ದರು.

ಸಂಸ್ಥೆಯ ಅಧ್ಯಕ್ಷ ಜಗದೇವ ದಿಗ್ಗಾಂವಕರ್ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಶಮೀಮ್ ಶಾಲಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿನಿಯರಾದ ಪೌರ್ಣಮಿ ಮತ್ತು ಭಾಗ್ಯಲಕ್ಷ್ಮಿ ನಿರೂಪಿಸಿದರು. ಆರ್.ಸುಮನ್‌ ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಿಕ್ಷಕಿಯರಾದ ರೋಸ್ ಮೇರಿ, ಹೇಮಾ ಕುಲಕರ್ಣಿ, ಶ್ರೀದೇವಿ, ಪ್ರತಿಮಾ ಕುಲಕರ್ಣಿ, ಮರಿಯಮ್, ನಾಗವೇಣಿ ಜಳಕಿ, ಲಲಿತಾ ರಾಠೋಡ, ಕನಿಷ್ಕಾ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT