ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ: ‘ಗತಿಸಿದವರ ಸ್ಮರಣಾರ್ಥ ಮಾಡುವ ಕರ್ಮವೇ ಶ್ರಾದ್ಧ’

ಮಹಾಲಯ ಅಮಾವಾಸ್ಯೆಯ ಸರ್ವಪಿತೃ ಕಾರ್ಯ ಸಂಪನ್ನ
Published 14 ಅಕ್ಟೋಬರ್ 2023, 16:18 IST
Last Updated 14 ಅಕ್ಟೋಬರ್ 2023, 16:18 IST
ಅಕ್ಷರ ಗಾತ್ರ

ಕಲಬುರಗಿ: ‘ತನ್ನ ಪರಿವಾರ, ಮಡದಿ, ಮಕ್ಕಳ ಒಳಿತಿಗೆ ಗತಿಸಿದವರನ್ನು ಸ್ಮರಿಸಿ ಮಾಡುವ ಕರ್ಮವೇ ಶ್ರಾದ್ಧ. ಶ್ರಾದ್ಧದಿಂದ ಸಂತುಷ್ಟರಾದ ಪಿತೃ ಪಿತಾಮಹಾದಿಗಳು ಶ್ರಾದ್ಧ ಕರ್ತೃವಿಗೆ ಆಯುಷ್ಯ, ಸಂತತಿ, ಧನ, ವಿದ್ಯಾ, ಜ್ಞಾನ, ಸುಖ, ಸಂಪತ್ತುಗಳನ್ನು ದಯಪಾಲಿಸುತ್ತಾರೆ’ ಎಂದು ಯೋಗೀಶ್ವರ ಯಾಜ್ಞವಲ್ಕ್ಯ ಸಮಿತಿ ಕಾರ್ಯದರ್ಶಿ ರಾಘವೇಂದ್ರ ವಕೀಲ ತಿಳಿಸಿದರು.

ನಗರದ ಸಂಗಮೇಶ್ವರ ಬಡಾವಣೆಯ ಸೂರ್ಯನಾರಾಯಣ ದೇವಸ್ಥಾನದ ಯೋಗೀಶ್ವರ ಯಾಜ್ಞವಲ್ಕ್ಯಗುರುಗಳ ಸನ್ನಿಧಾನದಲ್ಲಿ ಪಿತೃ ಪಕ್ಷದ ಅಂತಿಮ ದಿನವಾದ ಸರ್ವಪಿತೃ ಅಮಾವಾಸ್ಯೆ ಸಾಮೂಹಿಕ ಶ್ರಾದ್ಧ ಕಾರ್ಯಕ್ರಮದ ನಂತರ ಅವರು ಮಾತನಾಡಿದರು.

ಕಣ್ವ ಮಠದ ಪೀಠಾಧಿಪತಿ ವಿದ್ಯಾಕಣ್ವ ವಿರಾಜತೀರ್ಥರ ಆದೇಶದಂತೆ ಸಮಿತಿಯ ಅಧ್ಯಕ್ಷ ಮಲ್ಹಾರರಾವ ಗಾರಂಪಳ್ಳಿ ಅವರ ನೇತೃತ್ವದಲ್ಲಿ ಕಳೆದ 15 ದಿನಗಳಿಂದ ನಡೆದ ಸರ್ವ ಪಿತೃ ಅಮಾವಾಸ್ಯೆ ದಿನ ಶ್ರಾದ್ಧ ಪಕ್ಷಗಳು ಶಾಸ್ತ್ರೋಕ್ತವಾಗಿ ವಿಧಿ ವಿಧಾನ ಪೂರ್ವಕವಾಗಿ ಸಂಪನ್ನಗೊಂಡವು. 

ವೈದಿಕರಾದ ಆಕಾಶರಾಜಾಚಾರ್ಯ ಮಾತನಾಡಿದರು. ರಾಮಾಚಾರ್ಯ ಅಗ್ನಿಹೋತ್ರಿ, ಶಾಮಾಚಾರ್ಯ ಬೈಚಬಾಳ, ಚಂದ್ರಕಾಂತ ಗದಾರ್, ತಿರುಮಲರಾವ್ ದೋಟಿಹಾಳ, ವೆಂಕಟೇಶ್ ಕುಲಕರ್ಣಿ, ಪ್ರಾಣೇಶಾಚಾರ್ಯ ಬೈಚಬಾಳ, ಭೀಮರಾವ್ ಕುಲಕರ್ಣಿ, ಭೀಮಸೇನರಾವ್ ಸಿಂಧಿಗೇರಿ, ಮಂಜುನಾಥ್ ಕುಲಕರ್ಣಿ, ಪ್ರಮೋದ್ ಕುಲಕರ್ಣಿ, ಅವಧೂತ ಕುಲಕರ್ಣಿ, ಶ್ರೀಧರ್ ಮರಗುತ್ತಿ, ಸುಧೀರ್ ಕುಲಕರ್ಣಿ, ಶ್ರೀಧರ್ ಕುಲಕರ್ಣಿ, ವಿನುತ್‌ ಜೋಶಿ, ವೆಂಕಟೇಶ್ ಹುಲಚೇರಿ, ಅನಂತಕೃಷ್ಣ ವಕೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT