ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ | ಕಾರು ಪಲ್ಟಿ: ಪ್ರಯಾಣಿಕರು ಪಾರು

Published 30 ಮೇ 2024, 16:18 IST
Last Updated 30 ಮೇ 2024, 16:18 IST
ಅಕ್ಷರ ಗಾತ್ರ

ಕಮಲಾಪುರ: ತಾಲ್ಲೂಕಿನ ಮರಗುತ್ತಿ ಕ್ರಾಸ್ ಬಳಿ ಗುರುವಾರ ಕಾರು ಪಲ್ಟಿಯಾಗಿದ್ದು, ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸವಕಲ್ಯಾಣ ನಿವಾಸಿ ಉದಯಕುಮಾರ ಈಶ್ವರ ದುರ್ಗೆ ಹಾಗೂ ಇವರ ಸಹೋದರಿಯ ಮಗಳಾದ ಈರಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇವರು ಬಸವಕಲ್ಯಾಣದಿಂದ ಕಲಬುರಗಿಗೆ ಆಗಮಿಸುತ್ತಿದ್ದರು. ಕಾರು ನಿಯಂತ್ರಣ ತಪ್ಪಿ ಒಮ್ಮೆಲೆ ಹೆದ್ದಾರಿ ಬದಿಗೆ ತೆರಳಿದೆ. ಎದರುಗಿದ್ದ ಮಣ್ಣಿನದಿಬ್ಬ ಹತ್ತಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಉದಯಕುಮಾರ ಹಾಗೂ ಈರಮ್ಮ ಬಚಾವಾಗಿದ್ದಾರೆ. ಕಮಲಾಪುರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT