ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಜನರೇ ನನಗೆ ಹೈಕಮಾಂಡ್ : ನಿತೀನ್ ಗುತ್ತೇದಾರ

Published 6 ಏಪ್ರಿಲ್ 2024, 15:59 IST
Last Updated 6 ಏಪ್ರಿಲ್ 2024, 15:59 IST
ಅಕ್ಷರ ಗಾತ್ರ

ಅಫಜಲಪುರ: ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನನಗೆ ಸೋಲಾಗಿರಬಹುದು, ಆದರೆ ಹೆಚ್ಚಿನ ಮತಗಳನ್ನು ನೀಡಿ ಬೆಂಬಲಿಸಿರುವ ತಾಲ್ಲೂಕಿನ ನನ್ನ ಮತದಾರರು ಹಾಗೂ ಕಾರ್ಯಕರ್ತರಿಗಾಗಿ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತೇನೆ. ನನ್ನ ಜನರೇ ನನಗೆ ಹೈಕಮಾಂಡ್, ನಿಮ್ಮ ಅಭಿಪ್ರಾಯದಂತೆ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ’ ಎಂದು ಜಿ.ಪಂ. ಮಾಜಿ ಅಧ್ಯಕ್ಷ ನಿತೀನ್ ಗುತ್ತೇದಾರ ಹೇಳಿದರು.

ತಾಲ್ಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಶನಿವಾರ ಬೆಂಬಲಿಗರ ಸಭೆ ನಡೆಸಿ ಮಾತನಾಡಿದ ಅವರು, ‘ನಾನು ಶಾಸಕನಾಗಲೇಬೇಕು ಎಂಬ ಉದ್ದೇಶದಿಂದ ಚುನಾವಣೆಗೆ ಬಂದವನಲ್ಲ, ಜನರ ಆಶೋತ್ತರಗಳನ್ನು ಈಡೇರಿಸಲು ಬಂದಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳ ಮುಖಂಡರು ನನಗೆ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ. ಕ್ಷೇತ್ರದ ಜನರೇ ನನ್ನ ಹೈಕಮಾಂಡ್‌. ಅವರ ನಿರ್ಣಯವೇ ನನ್ನ ನಿರ್ಣಯವಾಗಿದೆ. ನಿಮ್ಮೆಲ್ಲರ ಒಗ್ಗಟ್ಟಿನಿಂದಾಗಿ ರಾಷ್ಟ್ರೀಯ ಪಕ್ಷಗಳು ನಮಗೆ ಬೆಂಬಲಿಸಿ ಎನ್ನುತ್ತಿದ್ದಾರೆ’ ಎಂದು ತಿಳಿಸಿದರು. ನಾನು ತೆಗೆದುಕೊಳ್ಳುವ ನಿರ್ಣಯಕ್ಕೆ ನಿವೆಲ್ಲರೂ ಬದ್ಧರಾಗಿರಿ’ ಎಂದು ಮನವಿ ಮಾಡಿದರು.

ಯುವ ಮುಖಂಡ ಸಚಿನ್‌ ರಾಠೋಡ, ತುಕಾರಾಮಗೌಡ ಪಾಟೀಲ್ ಮಾತನಾಡಿ, ‘ನಿತಿನ್ ಗುತ್ತೇದಾರ ಅವರು ಜನಸಾಮಾನ್ಯರ ಹಿತಾಸಕ್ತಿಗಾಗಿ ರಾಜಕೀಯ ಅಧಿಕಾರವಿಲ್ಲದಿದ್ದರೂ ಹೋರಾಟ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಅವರು ಕೈಗೊಳ್ಳುವ ನಿರ್ಣಯಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ’ ಎಂದು‌ ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ಮಕಬುಲ್ ಪಟೇಲ್, ವೀರಯ್ಯ ಸ್ವಾಮಿ, ಭಾಷಾ ಪಟೇಲ್, ತುಕಾರಾಮಗೌಡ ಪಾಟೀಲ್, ನಾಗೇಶ ಕೊಳ್ಳಿ ಮಾತನಾಡಿ, ‘ನಿತಿನ್ ಗುತ್ತೇದಾರ ಅವರು ಯಾವುದೇ ಪಕ್ಷಕ್ಕೆ ಸೇರ್ಪಡೆಯಾದರೂ ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದರು.

ಸಭೆಯಲ್ಲಿ ಅರವಿಂದ ಹಾಳಕಿ, ಕಲ್ಯಾಣರಾವ ನಾಗೋಜಿ, ರಾಜುಗೌಡ ಅವರಳ್ಳಿ, ರಮೇಶ ಬಾಕೆ, ತುಕಾರಾಮಗೌಡ ಪಾಟೀಲ್, ಶಿವಪುತ್ರಪ್ಪ ಕರೂರ, ಮಹಾದೇವ ಗುತ್ತೇದಾರ, ಭಾಷಾ ಪಟೇಲ್, ದಿಲೀಪ್ ಪಾಟೀಲ್, ಅಕ್ಷಯ ಗುತ್ತೇದಾರ, ಶಂಕು ಮ್ಯಾಕೇರಿ, ಶಾಂತಯ್ಯ ಹಿರೇಮಠ, ಗುರಣ್ಣ ಪಡಶೆಟ್ಟಿ, ಪಾಷಾ ಮಣೂರ, ಚಂದ್ರಶೇಖರ ನಿಂಬಾಳ, ರಾಜು ಜಿಡ್ಡಗಿ, ಅಶೋಕ ಗುಡಡ್ಡಗಿ, ನಾಗೇಶ ಕೊಳ್ಳಿ, ಮಹಾಂತೇಶ ಬಡದಾಳ, ಶಾಂತಗೌಡ ಪಾಟೀಲ್, ಧನರಾಜ ನೂಲಾ, ಸಚಿನ್‌ ರಾಠೋಡ, ಸುನಿಲ್ ಶೆಟ್ಟಿ, ಧಾನು ಫತಾಟೆ, ರಮೇಶ ಪಾಟೀಲ್, ಲಕ್ಷ್ಮೀಪುತ್ರ ಹುಲಿ ಇತರರು ಹಾಜರಿದ್ದರು.

ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಸಭೆಯಲ್ಲಿ ಶನಿವಾರ ಭಾಗವಹಿಸಿದ್ದ ಜನಸ್ತೋಮ
ಅಫಜಲಪುರ ತಾಲ್ಲೂಕಿನ ಸ್ಟೇಷನ್ ಗಾಣಗಾಪುರದಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ನಿತಿನ್ ಗುತ್ತೇದಾರ ಸಭೆಯಲ್ಲಿ ಶನಿವಾರ ಭಾಗವಹಿಸಿದ್ದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT