ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭರ್ತಿಯಾಗಿ ಓಡಿದ ವಾರದ ವಿಶೇಷ ಕಲಬುರಗಿ– ಬೆಂಗಳೂರು ರೈಲು

Published 14 ಏಪ್ರಿಲ್ 2024, 5:08 IST
Last Updated 14 ಏಪ್ರಿಲ್ 2024, 5:08 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿಯಿಂದ ನೇರವಾಗಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪದ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಸಂಚರಿಸುವ ಎಸ್‌ಎಂವಿಬಿ–ಕೆಎಲ್‌ಬಿಜಿ ವಾರದ ವಿಶೇಷ ರೈಲು ಶನಿವಾರ ಪ್ರಯಾಣಿಕರಿಂದ ಭರ್ತಿಯಾಗಿ ಸಂಚರಿಸಿತು.

ಎಸ್‌ಎಂವಿಬಿ – ಕೆಎಲ್‌ಬಿಜಿ ವಾರದ ವಿಶೇಷ ರೈಲು ಫೆಬ್ರುವರಿ 28ರಂದು ಕಲಬುರಗಿಯಲ್ಲಿ ಚಾಲನೆಗೊಂಡಿತ್ತು. ಅದಾದ ನಂತರ ಪ್ರತಿ ಶನಿವಾರ ಕಲಬುರಗಿಯಿಂದ ಹೊರಡಬೇಕಿತ್ತು. ಆ ನಂತರ ಒಂದು ದಿನವೂ ಸಂಚಾರ ಮಾಡಿರಲಿಲ್ಲ. ಏಪ್ರಿಲ್ 12ರಂದು ಬೆಂಗಳೂರಿನಿಂದ ಹೊರಟು ಶನಿವಾರ (ಏ.13) ಬೆಳಿಗ್ಗೆ ಕಲಬುರಗಿ ತಲುಪಿತು. ರೈಲಿನ ಎಲ್ಲ ಆಸನಗಳು ಭರ್ತಿಯಾಗಿದ್ದವು. ಶನಿವಾರ ಸಂಜೆ ಬೆಂಗಳೂರಿನತ್ತ ಹೊರಟಾಗಲೂ ಆಸನಗಳು ಭರ್ತಿಯಾಗಿದ್ದವು.

ಬೆಂಗಳೂರಿನಿಂದ ಕಲಬುರಗಿಗೆ ಏಪ್ರಿಲ್ 19, 26 ಹಾಗೂ ಮೇ ತಿಂಗಳಲ್ಲಿ 3, 10, 17, 24, 31 ಮತ್ತು ಜೂನ್ ತಿಂಗಳಲ್ಲಿ 7, 14ರಂದು ಸಂಚರಿಸಲಿದೆ. ಕಲಬುರಗಿಯಿಂದ ಬೆಂಗಳೂರಿಗೆ ಏಪ್ರಿಲ್ 13, 20, 27 ಮತ್ತು ಮೇ ತಿಂಗಳಲ್ಲಿ 4, 11, 18, 25ರಂದು ಹಾಗೂ ಜೂನ್ ತಿಂಗಳಲ್ಲಿ 1, 8, 15ರಂದು ಸಂಚರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT