ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳೇಶ್ವರ ದೇವಸ್ಥಾನ: ಸಂಭ್ರಮದ ದೀಪೋತ್ಸವ

Published 30 ಏಪ್ರಿಲ್ 2024, 6:10 IST
Last Updated 30 ಏಪ್ರಿಲ್ 2024, 6:10 IST
ಅಕ್ಷರ ಗಾತ್ರ

ಕಾಳಗಿ: ದಕ್ಷಿಣಕಾಶಿ ಎಂದೇ ಹೆಸರಾದ ತೀರ್ಥಕ್ಷೇತ್ರ ಕಾಳಗಿ ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭ್ರಮದ ದೀಪೋತ್ಸವ ಜರುಗಿತು.

ನೀಲಕಂಠ ಕಾಳೇಶ್ವರ ಜಾತ್ರಾ ಮಹೋತ್ಸವದ ಮೊದಲ ದಿನ ಭಕ್ತರು ದೇವಸ್ಥಾನದಲ್ಲಿ ಶ್ರದ್ಧೆ, ಭಕ್ತಿಯಿಂದ ದೀಪದಿಂದ ದೀಪ ಬೆಳಗಿಸಿ ಜಾತ್ರೆಗೆ ಬೆಳಕು ಚೆಲ್ಲಿದರು. ಹಲಗೆ-ಡೊಳ್ಳು, ಭಾಜಾ-ಭಜಂತ್ರಿಯೊಂದಿಗೆ ಹಿರೇಮಠದಿಂದ ಮೆರವಣಿಗೆಯ ಮೂಲಕ ಆಗಮಿಸಿದ ಊರ ಪ್ರಮುಖರು, ನೀಲಕಂಠ ಕಾಳೇಶ್ವರ ಲಿಂಗಕ್ಕೆ ಕಾಯಿಕರ್ಪೂರ ಮಾಡಿ ಮಂಗಳಾರತಿ ಸಲ್ಲಿಸಿದರು.

ಬಳಿಕ ಭರತನೂರಿನ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಚಂದ್ರಮೌಳಿ ಸ್ವಾಮೀಜಿ, ಹಿರೇಮಠದ ನೀಲಕಂಠ ಮರಿದೇವರು ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ಮಹಿಳೆಯರು, ಯುವಕರು, ಮಕ್ಕಳು ಎನ್ನದೆ ಅಪಾರ ಭಕ್ತರು ದೇವಸ್ಥಾನ ಕಟ್ಟಡ ಸಂಕೀರ್ಣದ ಎಲ್ಲೆಂದರಲ್ಲಿ ದೀಪ ಹಚ್ಚಿ ಮೆರಗುತಂದರು.

ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಕಮಲಾಪುರ, ಪದಾಧಿಕಾರಿ ಶಿವಶರಣಪ್ಪ ಗುತ್ತೇದಾರ, ವಿಶ್ವನಾಥ ವನಮಾಲಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶರಣಗೌಡ ಪೋ. ಪಾಟೀಲ, ವರ್ತಕರ ಸಂಘದ ಅಧ್ಯಕ್ಷ ಸಂತೋಷ ಪತಂಗೆ, ವಿದ್ಯಾಸಾಗರ ವನಮಾಲಿ, ಶೇಖರ ಪಾಟೀಲ, ಪ್ರಭು ರಟಕಲ, ಶಾಮರಾವ ಕಡಬೂರ, ನೀಲಕಂಠರಾವ ಮಡಿವಾಳ, ಗುರುಲಿಂಗಯ್ಯ ಮಠಪತಿ, ರಾಚಯ್ಯ ಸಾಲಿ, ಕಾಳಪ್ಪ ಕರೆಮನೋರ ಅನೇಕರು ಪಾಲ್ಗೊಂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT