ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಲ್ಲಾಪುರ: ಮಲಗಿದ ಸ್ಥಿತಿಯಲ್ಲಿಯೇ ವ್ಯಕ್ತಿ ಸಾವು

Published 23 ನವೆಂಬರ್ 2023, 15:31 IST
Last Updated 23 ನವೆಂಬರ್ 2023, 15:31 IST
ಅಕ್ಷರ ಗಾತ್ರ

ಯಲ್ಲಾಪುರ: ಮನೆಯ ಹಾಲ್‌ನಲ್ಲಿ ಮಲಗಿದ ವ್ಯಕ್ತಿಯೊಬ್ಬರು ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟ ಘಟನೆ ತಾಲ್ಲೂಕಿನ ಚವತ್ತಿಯಲ್ಲಿ ಬುಧವಾರ ನಡೆದಿದೆ.

ಚವತ್ತಿ ಗ್ರಾಮದ ನಿವಾಸಿ ಜಯಂತ ನಾಗಪ್ಪ ನಾಯ್ಕ (54) ಹೊಸಮನೆ ಮೃತರು.

ಇವರು ಹಲವು ವರ್ಷಗಳಿಂದ ಮದ್ಯ ಸೇವನೆ ಮಾಡುತ್ತಿದ್ದರು. ಈಚೆಗೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದರು. ನನ್ನಿಂದ ನಿಮಗೆ ತೊಂದರೆ ಆಗುತ್ತಿದೆ ಮುಂದೆ ನನಗೆ ನಡೆದಾಡಲೂ ಆಗುವುದಿಲ್ಲ ಎಂದು ಬೇಸರಿಸುತ್ತಿದ್ದರು. ಹಾಲ್‌ನಲ್ಲಿ ಮಲಗಿದ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೃತರ ಮಗ ಸತೀಶ ಜಯಂತ ನಾಯ್ಕ ಯಲ್ಲಾಪುರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT