ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಖಾಸಗಿ ಬ್ಯಾಂಕ್‌ನ ₹20.66 ಲಕ್ಷ ದುರುಪಯೋಗ: ದೂರು ದಾಖಲು

Published 7 ಜೂನ್ 2024, 16:02 IST
Last Updated 7 ಜೂನ್ 2024, 16:02 IST
ಅಕ್ಷರ ಗಾತ್ರ

ಕಲಬುರಗಿ: ಖಾಸಗಿ ಬ್ಯಾಂಕ್‌ನ ₹20.66 ಲಕ್ಷ ಮೊತ್ತದ ಹಣವನ್ನು ದುರುಪಯೋಗ ಮಾಡಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬರ ವಿರುದ್ಧ ಆಶೋಕ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಭಾರತ್‌ ಫೈನಾನ್ಸ್‌ ಲಿಮಿಟೆಡ್‌ನ ಫೀಲ್ಡ್‌ ಆಫೀಸರ್‌ ಆಗಿದ್ದ ಆಳಂದ ತಾಲ್ಲೂಕಿನ ಬೆಳಮಗಿ ಗ್ರಾಮದ ನಿವಾಸಿ ಲಕ್ಕಪ್ಪ ಮಲ್ಲಿಕಾರ್ಜುನ ಗಡ್ಡೆ ಎಂಬಾತ ಬ್ಯಾಂಕ್‌ನ ಸದಸ್ಯರ ಸಾಲದ ಖಾತೆಗೆ ಜಮೆ ಮಾಡದೇ ಇಂಡಸ್‌ ಬ್ಯಾಂಕ್‌ನಲ್ಲಿ ಸದಸ್ಯರ ಖಾತೆ ತೆರೆದು ಹಣ ಜಮೆ ಮಾಡಿದ್ದಾರೆ.

ಹತ್ತಿರದ ಬ್ಯಾಂಕ್‌ಗೆ ಬಂದು ಬಯೊಮೆಟ್ರಿಕ್‌ ಮೂಲಕ ಸಾಲ ತೆಗೆದುಕೊಳ್ಳುವುದು. ಸಾಲ ನೀಡಿ ಮರುಪಾವತಿ ಸಹ ಮಾಡಿಕೊಳ್ಳುತ್ತಿದ್ದಾರೆ. ಬ್ಯಾಂಕ್‌ ಹಣ ಸ್ವಂತಕ್ಕೆ ಬಳಸಿದ್ದಾರೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬ್ಯಾಂಕ್‌ನ ಬ್ರ್ಯಾಂಚ್‌ ಮ್ಯಾನೇಜರ್‌ ಸಚಿನ್‌ ಹದಗಲ್‌ ದೂರಿನಲ್ಲಿ ಮನವಿ ಮಾಡಿದ್ದಾರೆ.

ವೇತನ ವಿಚಾರಿಸಿದಕ್ಕೆ ಹಲ್ಲೆ: ದೂರು– ವೇತನ ನೀಡುವ ಬಗ್ಗೆ ವಿಚಾರಿಸಿದಕ್ಕೆ ನಿಲಯ ಮೇಲ್ವಿಚಾರಕಿ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಬಿಸಿಎಂ ತಾಲ್ಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕನ ವಿರುದ್ಧ ಬ್ರಹ್ಮಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಗರದ ಗೊಲ್ಲರ ಗಲ್ಲಿಯಲ್ಲಿರುವ ಬಿಸಿಎಂ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕ ಸಿದ್ರಾಮಪ್ಪ ಪಾಟೀಲ ಎಂಬುವವರು ಅವಾಚ್ಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಬೈಕ್‌ ಸವಾರ ಸಾವು: ಕಲಬುರಗಿ: ಬೈಕ್‌ಗೆ ಕಾರ್‌ ಡಿಕ್ಕಿಯಾದ ಪರಿಣಾಮ ಬೈಕ್‌ ಸವಾರ ಸಾವನ್ನಪಿದ ಘಟನೆ ಜೇವರ್ಗಿ ಕಲಬುರಗಿ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಜೇವರ್ಗಿ ತಾಲ್ಲೂಕಿನ ಕುಮನ್‌ ಸಿರಸಗಿ ನಿವಾಸಿ ಮಹಿಬೂಬ್‌ ಸಾಬ್‌ ಮಕಾಂದಾರ ಮೃತರು. ಜೇವರ್ಗಿಯಿಂದ ಕಲಬುರಗಿಗೆ ಬರುವಾಗ ಈ ಅಪಘಾತ ಸಂಭವಿಸಿದೆ. ಈ ಕುರಿತು ನಗರ ಸಂಚಾರಿ ಪೊಲೀಸ್‌ ಠಾಣೆ–1ರಲ್ಲಿ ದೂರು ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT