ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೀಸಾ ಕೊಡಿಸುವುದಾಗಿ ₹ 11.20 ಲಕ್ಷ ವಂಚನೆ

Published 3 ಜೂನ್ 2024, 3:20 IST
Last Updated 3 ಜೂನ್ 2024, 3:20 IST
ಅಕ್ಷರ ಗಾತ್ರ

ಕಲಬುರಗಿ: ವಿದೇಶಕ್ಕೆ ತೆರಳಲು ವೀಸಾ ಮಾಡಿಸಿಕೊಟ್ಟು ಅಲ್ಲಿಯೇ ಕೆಲಸ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ ಆರೋಪದಲ್ಲಿ ಆಳಂದ ಪಟ್ಟಣದ ಇರ್ಫಾನ್ ಮೌಲಸಾಬ್, ಆಸಿಫ್ ಜಿಲಾನಿ ಮತ್ತು ಗಣೇಶ ಹುಮನಾಬಾದ್ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇರ್ಫಾನ್ ಉದ್ಯೋಗ ಆಕಾಂಕ್ಷಿಗಳನ್ನು ವಿದೇಶಕ್ಕೆ ಕಳುಹಿಸುವ ಏಜೆಂಟ್ ಎಂದು ಆಸಿಫ್ ಎಂಬಾತ ರಾಜಶೇಖರ ಕಾಶಿರಾಯ, ಅಶೋಕ ಚಿಂಚನಸೂರ ಸೇರಿದಂತೆ 15 ಮಂದಿ ಉದ್ಯೋಗ ಆಕಾಂಕ್ಷಿಗಳಿಗೆ ಪರಿಚಯಿಸಿದ್ದ. ಸಂತ್ರಸ್ತರಲ್ಲಿ ವಿದೇಶಕ್ಕೆ ಕಳುಹಿಸುವ ಆಸೆ ಹುಟ್ಟಿಸಿದ್ದ ಇರ್ಫಾನ್, ಪ್ರತಿಯೊಬ್ಬರಿಗೆ ₹ 1 ಲಕ್ಷ ಖರ್ಚಾಗುತ್ತದೆ ಎಂದಿದ್ದ. ಬಳಿಕ ಅವರೆಲ್ಲರಿಂದ ಮುಂಗಡವಾಗಿ ₹ 11.20 ಲಕ್ಷ ಪಡೆದು, ವೀಸಾ ಮಾಡಿಸಿಕೊಡದೆ ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌

ಬೈಕ್ ಸವಾರ ಸಾವು: ಜೇವರ್ಗಿ ತಾಲ್ಲೂಕಿನ ಯಾತನೂರ ಕಾಲುವೆ ಸಮೀಪದ ರಸ್ತೆ ಬದಿಯ ಹೊಂಡದಲ್ಲಿ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘತ್ತರಗಾದಲ್ಲಿನ ಪತ್ನಿ ಮನೆಗೆ ಬೈಕ್‌ ಮೇಲೆ ತೆರಳುತ್ತಿದ ಜೀವಣಗಿ ಗ್ರಾಮದ ಕೃಷ್ಣ ಲಕ್ಷ್ಮಣ (35) ಮೃತರು. ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಹಾಕಿಕೊಂಡು ಆತ್ಮಹತ್ಯೆ: ಆದರ್ಶ ನಗರದ ಮನೆಯೊಂದರಲ್ಲಿ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಕೊಳೆತ ಶವ ಪತ್ತೆಯಾಗಿದೆ.

ಅಂಬರೇಶ ಅಕ್ಕಣ್ಣ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡವರು. ಕುಟುಂಬ ಕಲಹದಿಂದ ಎರಡು ದಿನಗಳ ಹಿಂದೆಯೇ ನೇಣು ಹಾಕಿಕೊಂಡು ಸಾವನ್ನಪ್ಪಿರಬಹುದು. ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ, ಕೊಳೆತ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಂ.ಬಿ. ನಗರ ಪೊಲೀಸರು ತಿಳಿಸಿದ್ದಾರೆ.

ಪೆಟ್ರೋಲ್ ಟ್ಯಾಂಕರ್‌ಗೆ ಬಸ್ ಡಿಕ್ಕಿ: ಅಫಜಲಪುರ ತಾಲ್ಲೂಕಿನಲ್ಲಿ ತಾಲ್ಲೂಕಿನ ಗೊಬ್ಬುರವಾಡಿ–ಚೌಡಾಪುರ ರಸ್ತೆಯಲ್ಲಿ ಭಾನುವಾರ ಪೆಟ್ರೋಲ್ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಯಾವುದೇ ಜೀವಹಾನಿ ಸಂಭವಿಸಿಲ್ಲ.

ಗಾಣಗಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT