ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೋದಿ‌ ಹ್ಯಾಟ್ರಿಕ್: ಬಿಜೆಪಿ‌ ಕಾರ್ಯಕರ್ತರ ಸಂಭ್ರಮಾಚರಣೆ

Published 9 ಜೂನ್ 2024, 16:23 IST
Last Updated 9 ಜೂನ್ 2024, 16:23 IST
ಅಕ್ಷರ ಗಾತ್ರ

ಚಿಂಚೋಳಿ: ‘ಕಾಂಗ್ರೆಸ್ಸೇತರ ಪಕ್ಷದಿಂದ ಭಾರತದ ಪ್ರಧಾನ‌ಮಂತ್ರಿಯಾಗಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುವ ಮೂಲಕ‌ ಹೊಸ ದಾಖಲೆ ಬರೆದಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಕಟ್ಟಿಮನಿ‌ ತಿಳಿಸಿದರು.

ಮೋದಿ ಪ್ರಮಾಣ ವಚನ ಸ್ವೀಕಾರದ ಸಂಭ್ರಮಾಚರಣೆಯಲ್ಲಿ‌ ಭಾನುವಾರ ಮಾತನಾಡಿದ ಅವರು, ‘ಅಟಲ ಬಿಹಾರಿ ವಾಜಪೇಯಿ ಅವರ ನಂತರ ದೇಶಕಂಡ ಅತ್ಯಂತ ಜನಪ್ರಿಯ ನಾಯಕರಾಗಿ‌ ಮೋದಿ ಹೊರಹೊಮ್ಮಿದ್ದಾರೆ. ಮೋದಿ ಅವರ ಮೂರನೇ ಅವಧಿಯಲ್ಲಿ‌ ದೇಶ ಜಗತ್ತಿನ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರ ಹೊಮ್ಮಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಜಿಟಿ ಜಿಟಿ ಮಳೆಯಲ್ಲೂ ಪಟಾಕಿ ಸಿಡಿಸಿ ಜಯಘೋಷ ಕೂಗಿ ಸಂಭ್ರಮಿಸಿದರು. ಬಿಜೆಪಿ ಮುಖಂಡ ಸಂತೋಷ ಗಡಂತಿ, ಕೆ.ಎಂ.ಬಾರಿ, ಆಕಾಶ ಕೊಳ್ಳೂರು, ನೀಲಕಂಠ ರಾಠೋಡ, ಚಂದ್ರಶೆಟ್ಟಿ ಜಾಧವ, ವಿಜಯಕುಮಾರ ರಾಠೋಡ, ಪಂಡರಿ ಲೊಡ್ಡನೋರ, ನಾರಾಯಣ ಚವ್ಹಾಣ, ಶ್ರೀಮಂತ ಕಟ್ಟಿಮನಿ, ಶಿವಕುಮಾರ ಪೋಚಾಲಿ, ನಾರಾಯಣ ನಾಟಿಕಾರ, ಶ್ರೀನಿವಾಸ ಚಿಂಚೋಳಿಕರ, ಹಣಮಂತ ಪೂಜಾರಿ ಮೊದಲಾದವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT