ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಬಿಎನ್ ಆಸ್ಪತ್ರೆಯಲ್ಲಿ ಶುಶ್ರೂಷಕರ ದಿನಾಚರಣೆ

Published 14 ಮೇ 2024, 9:06 IST
Last Updated 14 ಮೇ 2024, 9:06 IST
ಅಕ್ಷರ ಗಾತ್ರ

ಕಲಬುರಗಿ: ಕೆಬಿನ್ ವಿಶ್ವವಿದ್ಯಾಲಯದ ಕೆಬಿಎನ್ ಆಸ್ಪತ್ರೆಯ ನರ್ಸಿಂಗ್ ವಿಭಾಗದಲ್ಲಿ ಶುಶ್ರೂಷಕರ ದಿನವನ್ನು ಸೋಮವಾರ ಆಚರಿಸಲಾಯಿತು.

ಕೆಬಿಎನ್ ವಿ.ವಿ.ಯ ಮೆಡಿಕಲ್ ಡೀನ್ ಡಾ.ಸಿದ್ದೇಶ ಸಿರವಾರ ಮಾತನಾಡಿ, ‘ಆರೋಗ್ಯ ಕ್ಷೇತ್ರದಲ್ಲಿ ನರ್ಸ್‌ಗಳ ಸ್ಥಾನ ಮಹತ್ವದಾಗಿದೆ. ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡಿದ ನಂತರ, ರೋಗಿಗಳ ಆರೈಕೆಯಲ್ಲಿ ಶುಶ್ರೂಷಕರು ತೊಡಗುತ್ತಾರೆ. ಯಾವುದೇ ಆಸ್ಪತ್ರೆಯ ಗುಣಮುಟ್ಟದ ಚಿಕಿತ್ಸೆಯು ಶುಶ್ರೂಷಕರನ್ನು ಅವಲಂಬಿಸಿರುತ್ತದೆ’ ಎಂದರು.

ಹಿರಿಯ ವೈದ್ಯ ಡಾ.ಪಿ.ಎಸ್. ಶಂಕರ್ ಮಾತನಾಡಿ, ‘ರೋಗಿಗಳು ಗುಣ ಮುಖರಾಗಲು ಶುಶ್ರೂಷಕರ ಸೇವೆ ಅನನ್ಯವಾಗಿದೆ. ರೋಗಿಗಳ ಚೇತರಿಕೆಯೇ ಶುಶ್ರೂಷಕರ ಪರಮ ಗುರಿಯಾಗಿದ್ದು, ಇದೊಂದು ಮಹತ್ವದ ವೃತ್ತಿ’ ಎಂದು ಶ್ಲಾಘಿಸಿದರು.

ಕೆಬಿಎನ್‌ ವೈದ್ಯಕೀಯ ಅಧೀಕ್ಷಕ ಡಾ.ಸಿದ್ಧಲಿಂಗ ಚೆಂಗಟಿ ಪ್ರಮಾಣ ವಚನ ಬೋಧಿಸಿದರು. ನರ್ಸ್‌ಗಳಿಗೆ ಸಸಿ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.

ನರ್ಸಿಂಗ್ ಅಧೀಕ್ಷಕಿ ಶೋಭಾ ರಾಣಿ ಅವರು ಗಣ್ಯರನ್ನು ಪರಿಚಯಿಸಿ, ಸ್ವಾಗತಿಸಿದರು. ನರ್ಸಿಂಗ್ ಮೇಲ್ವಿಚಾರಕ ಡಾ.ಮುಜಾಹಿ‌ದ್ ಅಲಿ ವಂದಿಸಿದರು.

ಕೆಬಿಎನ್ ಆಡಳಿತ ಅಧಿಕಾರಿ ಡಾ.ರಾಧಿಕಾ, ಡಾ.ಸುಜಾತಾ, ಡಾ.ಶಿಲ್ಪಾ, ಡಾ. ಸಚಿನ್ ಶಹಾ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT