ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಪ್ರಜಾವಾಣಿ ವರದಿಗೆ ಜೆಸ್ಕಾಂ ಸ್ಪಂದನೆ

Published 16 ಮೇ 2024, 15:30 IST
Last Updated 16 ಮೇ 2024, 15:30 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದ ಪ್ರವಾಸಿ ಮಂದಿರದ ಎದುರುಗಡೆಯ ಮುಖ್ಯರಸ್ತೆಯ ಮೇಲೆ ವಿದ್ಯುತ್ ಕಂಬ ಬಾಗಿ, ಮಳೆ ಗಾಳಿಗೆ ಕೆಳಗೆ ಬೀಳುವ ಸ್ಥಿತಿಯಲ್ಲಿತ್ತು. ಈ ಕುರಿತು ಪ್ರಜಾವಾಣಿ ಗುರುವಾರದ ಕುಂದು ಕೊರತೆ ವಿಭಾಗದಲ್ಲಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಜೆಸ್ಕಾಂ ಸಿಬ್ಬಂದಿ ಬಾಗಿದ್ದ ವಿದ್ಯುತ್ ಕಂಬವನ್ನು ಗುರುವಾರವೇ ಸರಿಪಡಿಸಿದರು.

ವಿದ್ಯುತ್ ಕಂಬಕ್ಕೆ ಕನೆಕ್ಷನ್ ಸರ್ವಿಸ್ ವೈರ್‌ಗಳು ಜಾಸ್ತಿ ಇರುವುದರಿಂದ ಕಂಬ ಬಾಗುತ್ತಿತ್ತು. ಬಿರುಗಾಳಿಗೆ ಕೆಳಗೆ ಬೀಳುವ ಸಂಭವವಿತ್ತು. ಈ ಸ್ಥಳದ ಸುತ್ತಮುತ್ತ ಹೆಚ್ಚು ಜನದಟ್ಟಣೆ ಇರುವುದರಿಂದ ಜನರಿಗೆ ಸಾಕಷ್ಟು ಅಪಾಯವಿತ್ತು. ಜೆಸ್ಕಾಂನವರು ಕಂಬ ಸರಿಪಡಿಸಿದ್ದರಿಂದ ಜನರು ನಿಟ್ಟುಸಿರು ಬಿಡುವಂತಾಗಿದೆ. ಸಾರ್ವಜನಿಕರು ಜೆಸ್ಕಾಂ ಸಿಬ್ಬಂದಿಗೆ ಮತ್ತು ‘ಪ್ರಜಾವಾಣಿ’ಗೆ ಅಭಿನಂದನೆ ತಿಳಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT