ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೂಳಿಹಟ್ಟಿ ಶೇಖರ ಅವರದ್ದು ಹುರುಳಿಲ್ಲದ ಆರೋಪ: ವಿಜಯಕುಮಾರ ಆಡಕಿ

Published 8 ಡಿಸೆಂಬರ್ 2023, 16:19 IST
Last Updated 8 ಡಿಸೆಂಬರ್ 2023, 16:19 IST
ಅಕ್ಷರ ಗಾತ್ರ

ಸೇಡಂ: ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಅವರು ರಾಷ್ಟ್ರೀಯ ಸ್ವಯಂತ ಸೇವಕ ಸಂಘದ ಕಚೇರಿ ಬಗ್ಗೆ ಮಾಡಿರುವ ಆರೋಪದಲ್ಲಿ ಸತ್ಯಕ್ಕೆ ದೂರವಾಗಿದೆ. ಇದರಲ್ಲಿ ಹುರುಳಿಲ್ಲ’ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ವಿಜಯಕುಮಾರ ಆಡಕಿ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಸಂಪೂರ್ಣವಾಗಿ ಅವರು ತಿಳಿದುಕೊಳ್ಳದೆ, ವಿನಾಕಾರಣ ಆರೋಪ ಮಾಡಿರುವುದು ಸೂಕ್ತವಾದುದಲ್ಲ. ನಾಗಪುರದಲ್ಲಿನ ಆರ್.ಎಸ್.ಎಸ್ ಕಚೇರಿಗೆ ನಾನು ಹೋಗಿದ್ದೆ, ಆಗ ನನಗೆ ಪ್ರವೇಶ ನಿರಾಕರಿಸಿರಲಿಲ್ಲ. ಅಲ್ಲಿ ಯಾವುದೇ ರೀತಿಯ ಜಾತಿಯ ಪ್ರಶ್ನೆಯೇ ಉದ್ಭವಿಸಿರಲಿಲ್ಲ. ಆರ್.ಎಸ್.ಎಸ್ ಕಚೇರಿ ಪ್ರವೇಶಕ್ಕೆ ಯಾವುದೇ ನಿರ್ಭಂಧವಿಲ್ಲ. ಎಲ್ಲ ಜನಾಂಗದವರಿಗೂ ಮುಕ್ತ ಅವಕಾಶವಿದೆ. ಆರ್.ಎಸ್.ಎಸ್ ಎಂದಿಗೂ ದಲಿತರನ್ನು ಅವಮಾನಿಸಿಲ್ಲ. ಸೇಡಂನಲ್ಲಿ ಡಿಸೆಂಬರ್ 01 ರಂದು ನಡೆದ ವಿಶ್ವಹಿಂದು ಪರಿಷತ್ ದೀಪಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಸರ್ವ ಜಾತಿ ಜನಾಂಗದ ಮಹಿಳೆಯರು ಆಗಮಿಸಿದ್ದರು. ಜಾತ್ಯತೀತವಾಗಿ ಆರ್.ಎಸ್. ಎಸ್ ಬೆಳೆದಿದ್ದು, ಸಂಪೂರ್ಣವಾಗಿ ಒಳಮೀಸಲಾತಿ ಅಧ್ಯಯನ ಮಾಡಿದ್ದೆ ಸಂಘ’ ಎಂದರು.

‘ದೇವಾಲಯಗಳ್ಲಿ ಪ್ರವೇಶಕ್ಕೆ ಅನುಮತಿಯ ಜಾಗೃತಿಯನ್ನು ಮಾಡಿದ್ದು, ಬಿಜೆಪಿ ಮತ್ತು ಆರ್.ಎಸ್.ಎಸ್. ದಲಿತರ ಮನೆಗಳಿಗೆ ತೆರಳಿ ಅಲ್ಲಿ, ವಾಸ್ತವ್ಯ, ಉಪಹಾರ ಸೇವನೆ ಪ್ರಾರಂಭಿಸಿದ್ದೆ ಬಿಜೆಪಿ ಮತ್ತು ಆರ್.ಎಸ್.ಎಸ್. ಸಾಮರಸ್ಯದ ಸದ್ಭಾವನೆಯ ನಡಿಗೆಗೆ ಮುಂದಾಗಿರುವುದು ಆರ್.ಎಸ್.ಎಸ್. ಇಂತಹ ಸಂಘದ ಕಾರ್ಯದ ವಿರುದ್ಧ ಜಾತಿ ಆರೋಪ ಮಾಡಿರುವ ಗೂಳಿಹಟ್ಟಿ ಶೇಖರ ಅವರ ಆರೋಪ ನಿರಾಧಾರವಾಗಿದೆ’ ಎಂದರು.

ಬಸಣ್ಣ ರನ್ನೆಟ್ಟ, ರವಿ ಹಾಬಾಳ, ರಾಮು ಕಣೇಕಲ, ರವಿ ಸಾತನೂರ, ಭೀಮಾಶಂಕರ ಕೊರವಿ, ಅಶೋಕ ಕೊಡದೂರ, ಅನಿಲ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT