ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ಸಿಡಿಲಿಗೆ ಎಮ್ಮೆ ಸಾವು

Published 11 ಏಪ್ರಿಲ್ 2024, 15:38 IST
Last Updated 11 ಏಪ್ರಿಲ್ 2024, 15:38 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಕಂಗಲಾಗಿದ್ದ ಜನರಿಗೆ ಮಳೆ ತಂಪು ನೀಡಿತು. ಸಿಡಿಲಿಗೆ ಆನೂರು ಗ್ರಾಮದಲ್ಲಿ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಕಟ್ಟಿದ್ದ ಎಮ್ಮೆಯೊಂದು ಮೃತಪಟ್ಟಿದೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಗ್ರಾಮಗಳಲ್ಲಿ ಬಿರುಗಾಳಿಗೆ ಬಾಳೆ ಗಿಡಗಳು ಮತ್ತು ಮೇವಿನ ಬಣವಿ ಹಾಳಾದ ಬಗ್ಗೆ ವರದಿಯಾಗಿದೆ.

ತಾಲ್ಲೂಕಿನ ಆನೂರು ಗ್ರಾಮದ ರೈತ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಬೇವಿನ ಮರಕ್ಕೆ ಕಟ್ಟಿರುವ ಎಮ್ಮೆ ಸಿಡಿಲಿಗೆ ಸಾವನಪ್ಪಿರುವುದು
ತಾಲ್ಲೂಕಿನ ಆನೂರು ಗ್ರಾಮದ ರೈತ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಬೇವಿನ ಮರಕ್ಕೆ ಕಟ್ಟಿರುವ ಎಮ್ಮೆ ಸಿಡಿಲಿಗೆ ಸಾವನಪ್ಪಿರುವುದು

ಸಂಜೆ 5 ಗಂಟೆಗೆ ಗುಡುಗು ಮಿಂಚಿನೊಂದಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆವರೆಗೆ ಸುರಿದಿದೆ. ಬಳ್ಳೂರ, ಬಡದಾಳ, ಅತನೂರು, ಮಾತೋಳಿ, ರೇವೂರು, ಅಂಕಲಗಾ, ಭೋಗನಹಳ್ಳಿ, ಸಿದ್ಧನೂರು ಗ್ರಾಮಗಳಲ್ಲಿ ಮಳೆಯಾಗಿದೆ. ಕರಜಿಗಿ ಹೋಬಳಿಯಲ್ಲಿ ಮಳೆ ಇಲ್ಲ. ಉಡಚಣದಲ್ಲಿ ಸ್ವಲ್ಪ ಮಳೆಯಾಗಿದೆ. ಪಟ್ಟಣದಲ್ಲಿ ತುಂತುರು ಮಳೆಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT