ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಿಮ್ಸ್‌ಗೆ ಭದ್ರತಾ ಸೇವೆ: ₹42.38 ಕೋಟಿ ಪಾವತಿ: ಸಚಿವ ಡಾ.ಶರಣಪ್ರಕಾಶ ಪಾಟೀಲ

Published 21 ಫೆಬ್ರುವರಿ 2024, 15:56 IST
Last Updated 21 ಫೆಬ್ರುವರಿ 2024, 15:56 IST
ಅಕ್ಷರ ಗಾತ್ರ

ಕಲಬುರಗಿ: ‘ಐದು ವರ್ಷಗಳ ಅವಧಿಯಲ್ಲಿ ಜಿಮ್ಸ್‌ ಆಸ್ಪತ್ರೆಗೆ ಮೈಸೂರಿನ ಶಾರ್ಪ್ ವಾಚ್ ಇನ್ವೆಸ್ಟಿಗೇಷನ್ ಅಂಡ್ ಸೆಕ್ಯೂರಿಟಿ ಸೇವೆಗಳ ಸಂಸ್ಥೆ, ಧಾರವಾಡದ ಈಗಲ್ ಡಿಟೆಕ್ಟಿವ್ ಫೋರ್ಸ್‌ ಭದ್ರತಾ ಸೇವೆ ಒದಗಿಸಿವೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಅಧಿವೇಶನದಲ್ಲಿ ಸದಸ್ಯ ಬಿ.ಜಿ.ಪಾಟೀಲ ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ‘ಟೆಂಡರ್‌ ಮೂಲಕ ಈ ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿತ್ತು. ಸದ್ಯ ಈಗಲ್ ಡಿಟೆಕ್ಟಿವ್ ಫೋರ್ಸ್‌ ಭದ್ರತೆ ಒದಗಿಸುತ್ತಿದೆ. ಸೇವೆ ನೀಡಿದ್ದಕ್ಕಾಗಿ ಇಲ್ಲಿಯವರೆಗೂ ಈ ಎರಡೂ ಸಂಸ್ಥೆಗಳಿಗೆ ₹42.38 ಕೋಟಿ ಪಾವತಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT