ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಠಗಳಿಂದ ಶರಣ ಸಂಸ್ಕೃತಿ ಶ್ರೀಮಂತ: ಅಭಿನವ ಶಿವಲಿಂಗ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ; ದಾಸೋಹ ಸೇವೆ
Published 2 ಏಪ್ರಿಲ್ 2024, 4:45 IST
Last Updated 2 ಏಪ್ರಿಲ್ 2024, 4:45 IST
ಅಕ್ಷರ ಗಾತ್ರ

ಆಳಂದ: ‘12ನೇ ಶತಮಾನದ ಶರಣರು ಬಯಸಿದ ಸಮಾನತೆ, ಸಾತ್ವಿಕತೆ ನೆಲೆಯಲ್ಲಿ ಅನ್ನ, ಅಕ್ಷರ ದಾಸೋಹಗೈದ ನಾಡಿನ ಮಠಮಾನ್ಯಗಳಿಂದ ಶರಣ ಸಂಸ್ಕೃತಿಯು ಶ್ರೀಮಂತವಾಗಿದೆ’ ಎಂದು ಮಾದನ ಹಿಪ್ಪರಗಿ ಅಭಿನವ ಶಿವಲಿಂಗ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಸಿದ್ಧಗಂಗೆಯ ಲಿಂ.ಶಿವಕುಮಾರ ಸ್ವಾಮೀಜಿ ಅವರ 117ನೇ ಜಯಂತಿ ಅಂಗವಾಗಿ ವಿವಿಧ ಅಂಗಡಿ ಮಾಲೀಕರು ಹಾಗೂ ಸಿದ್ಧಗಂಗೆ ಮಠದ ಭಕ್ತರಿಂದ ಹಮ್ಮಿಕೊಂಡ ಜಯಂತಿ ಮತ್ತು ದಾಸೋಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ‘ಕರ್ನಾಟಕದಲ್ಲಿ ಸ್ವತಂತ್ರಪೂರ್ವದಿಂದಲೂ ಹಲವು ಮಠಗಳು ನಾಡುನುಡಿಗಾಗಿ ಹೋರಾಟ, ಸಮಾಜ ಸೇವೆ ಹಾಗೂ ಭಕ್ತರ ಕಲ್ಯಾಣಕ್ಕೆ ಕೈಗೊಂಡ ಜನಪರ ಕಾಯಕ್ರಮಗಳು ಇಂದಿಗೂ ಮುಂದುವರಿದಿವೆ. ವಿಶೇಷವಾಗಿ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ ಅವರು ಸಾವಿರಾರು ಬಡಮಕ್ಕಳಿಗೆ ಉಚಿತ ಶಿಕ್ಷಣದ ಮೂಲಕ ಮಕ್ಕಳ ಬದುಕು ರೂಪಿಸಿದ್ದಾರೆ. ಅವರ ನಿಸ್ವಾರ್ಥ ಸೇವೆಯ ಮೂಲಕ ನಾಡಿನ ಮಠಮಾನ್ಯಗಳಿಗೆ ಆದರ್ಶಪ್ರಾಯರಾಗಿದ್ದರು’ ಎಂದರು.

ಕೆಎಂಎಫ್‌ ಅಧ್ಯಕ್ಷ ಆರ್‌.ಕೆ.ಪಾಟೀಲ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅವಿಸ್ಮರಣೀವಾದುದು. ಅವರ ವ್ಯಕ್ತಿತ್ವ, ಸೇವೆ ಮಾದರಿಯಾಗಿದೆ’ ಎಂದರು.

ಶಕಾಪುರದ ವಿಶ್ವನಾಥ ಪಾಟೀಲ, ಆನಂದ ದೇಶಮುಖ ಮಾತನಾಡಿದರು. ಪ್ರಮುಖರಾದ ಲಿಂಗರಾಜ ಪಾಟೀಲ, ರತ್ನಗೀರೆ ಲೆಂಡೆ, ಶರಣಗೌಡ ಪಾಟೀಲ, ಮಲ್ಲಿನಾಥ ತುಕಾಣೆ, ಸಿದ್ಧರಾಮ ನಂದಗಾಂವ, ರಾಜು ಕಬಾಡೆ, ಮಹಾರಾಜ ಕಿಣಗಿ, ರವಿ ಗೋಳೆ, ಶರಣಯ್ಯ ಸ್ವಾಮಿ, ಸಿದ್ಧಲಿಂಗ ಸ್ವಾಮಿ ಉಪಸ್ಥಿತರಿದ್ದರು. ಸಾರ್ವಜನಿಕರಿಗಾಗಿ ಉಚಿತ ಅನ್ನ ಸಂತರ್ಪಣೆ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT