ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತತ್ವಪದ ಸಾಹಿತ್ಯ ಸಮ್ಮೇಳನ: ಅಧ್ಯಕ್ಷರಾಗಿ ಕಡಕೋಳ ರುದ್ರಮುನಿ ಶ್ರೀ ಆಯ್ಕೆ

Published 5 ಏಪ್ರಿಲ್ 2024, 6:19 IST
Last Updated 5 ಏಪ್ರಿಲ್ 2024, 6:19 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಈ ತಿಂಗಳ ಅಂತ್ಯದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ತತ್ವಪದ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಯಡ್ರಾಮಿ ತಾಲೂಕಿನ ಕಡಕೋಳ ಮಡವಾಳೇಶ್ವರ ಮಹಾಮಠದ ರುದ್ರಮುನಿ ಶಿವಾಚಾರ್ಯರವರನ್ನು ಆಯ್ಕೆ ಮಾಡಲಾಗಿದೆ’ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಕಡಕೋಳದ ಮಠದಲ್ಲಿ ಗುರುವಾರ ರುದ್ರಮುನಿ ಶಿವಾಚಾರ್ಯರನ್ನು ಸನ್ಮಾನಿಸಿ ಅಧಿಕೃತ ಆಹ್ವಾನ ನೀಡಲಾಯಿತು.

ಚಿಗರಳ್ಳಿ ಮಠದ ಮರುಳಶಂಕರ ದೇವರಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವರಾಜ ಅಂಡಗಿ, ಕೋಶಾಧ್ಯಕ್ಷ ಶರಣರಾಜ್ ಛಪ್ಪರಬಂದಿ, ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ನಾಗಪ್ಪ ಸಜ್ಜನ್, ಎಸ್.ಕೆ.ಬಿರಾದಾರ, ಬಲವಂತರಾಯ ಬಿರಾದಾರ ಅರಳಗುಂಡಗಿ, ಮಲ್ಲಿನಾಥಗೌಡ ಯಲಗೋಡ, ಕೆ.ಜಿ.ಬಿರಾದಾರ ವಸ್ತಾರಿ, ಮಲ್ಲಣ್ಣಗೌಡ ಪಾಟೀಲ ಕುಳಗೇರಿ, ಮಹಾಂತಪ್ಪ ಹವಳಗಿ, ಚನ್ನಮಲ್ಲಯ್ಯ ಹಿರೇಮಠ, ಕಲ್ಯಾಣಕುಮಾರ ಸಂಗಾವಿ, ರೇವಣಸಿದ್ಧಯ್ಯ ಜಿ.ಪುರಾಣಿಕ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT