ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೆಣಸಿನಕಾಯಿ ಬೆಳೆದು ಬರ ಗೆದ್ದ ರೈತ!

Published 31 ಡಿಸೆಂಬರ್ 2023, 6:06 IST
Last Updated 31 ಡಿಸೆಂಬರ್ 2023, 6:06 IST
ಅಕ್ಷರ ಗಾತ್ರ

ಯಡ್ರಾಮಿ: ಬರಗಾಲದಲ್ಲೂ ತಾಲ್ಲೂಕಿನ ಸುಂಬಡ ಗ್ರಾಮದ ರೈತ ಮಲ್ಲು ಚೌದ್ರಿ ತಮ್ಮ 2 ಎಕರೆ ಜಮೀನಿನಲ್ಲಿ ಕಾಲುವೆ ನೀರಿನ ಮೂ ಮೂಲಕ ಮೆಣಸಿನಕಾಯಿ ಬೆಳೆದು ಲಾಭದ ನಿರೀಕ್ಷೆಯಲ್ಲಿದ್ದಾರೆ. 

ಪ್ರತಿ ವರ್ಷ ಹತ್ತಿ, ತೊಗರಿ ಬೆಳೆಯುತ್ತಿದ್ದ ಮಲ್ಲು ಅವರು ಉತ್ತಮ ಬೆಲೆ ಸಿಗದ ಕಾರಣ ಈ ವರ್ಷ ಮೆಣಸಿನಕಾಯಿ ಬೆಳೆದಿದ್ದು 18 ರಿಂದ 20 ಕ್ವಿಂಟಾಲ್ ಇಳುವರಿ ನಿರೀಕ್ಷೆಯಿದೆ.

ಮೆಣಸಿನಕಾಯಿ ಬೆಲೆಯಲ್ಲಿ ಕೊಂಚ ಏರಿಕೆ ಕಂಡಿದ್ದರಿಂದ ಮಲ್ಲು ಚೌದ್ರಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಸದ್ಯ ಭರಪೂರ ಫಸಲು ಬಂದಿದೆ. 

ಎರಡು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಹಾಕಿ ₹3 ಲಕ್ಷ ಖರ್ಚು ಮಾಡಿದ್ದೇನೆ ಈಗ ಉತ್ತಮ ಬೆಲೆ ಇದೆ. ಆದರೆ ಕಟಾವು ಮಾಡಿದ ಬಳಿಕ ಆಗ ಎಷ್ಟು ದರವಿರುತ್ತದೆ ಎಂಬ ಭಯವಿದೆ. ಹೆಚ್ಚಿನ ಲಾಭ ನಿರೀಕ್ಷೆಯಲ್ಲಿದ್ದೇವೆ.
ಮಲ್ಲು ಚೌದ್ರಿ, ರೈತ

‘ಪ್ರತಿ ಎಕರೆಗೆ ಬೀಜ, ಗೊಬ್ಬರ, ಕೀಮಿನಾಶಕ ಹಾಗೂ ವೆಚ್ಚ ಸೇರಿ ₹1.50 ಲಕ್ಷ ಖರ್ಚಾಗುತ್ತದೆ. ಪಟ್ಟಣ ಸುತ್ತ ಬೆಳೆದ ಬೆಳೆ ಸೋಲಾಪುರ ಸೇರಿ ವಿವಿಧ ಭಾಗಗಳಲ್ಲಿ ಮಾರಾಟವಾಗುತ್ತದೆ. ಸೋಲಾಪುರದಲ್ಲಿ ಮೆಣಸಿನಕಾಯಿಗೆ ಸದ್ಯ ಕ್ವಿಂಟಾಲ್‍ಗೆ ₹20 ಸಾವಿರ ದರವಿದೆ’ ಎಂದು ರೈತ ಮಲ್ಲು ಪ್ರಜಾವಾಣಿಗೆ ತಿಳಿಸಿದರು.

ಜೆರಟಗಿಯಿಂದ ಮೆಣಸಿನಕಾಯಿ ಸಸಿ ತಂದು ನಾಟಿ ಮಾಡಿದ್ದಾರೆ. ಸಸಿ ಹಚ್ಚಲು ₹10 ಸಾವಿರ ಖರ್ಚಾಗಿದೆ. ಪ್ರತಿ ಎಕರೆಗೆ 13 ಸಾವಿರದಿಂದ 14 ಸಾವಿರ ಸಸಿ ಬೇಕಾಗುತ್ತವೆ.

ಈಗಾಗಲೇ 35 ಚೀಲ ಗೊಬ್ಬರ ಹಾಕಲಾಗಿದೆ. ಮೂರು ತಿಂಗಳಲ್ಲಿ 25 ಬಾರಿ ಕೀಟನಾಶ ಸಿಂಪಡಣೆ ಮಾಡಲಾಗಿದೆ. ಕೀಟನಾಶಕಕ್ಕೆ ₹5 ಸಾವಿರ, ಕಳೆ ತಗಿಯಲು ₹25 ಸಾವಿರ ಸೇರಿ ಒಟ್ಟು ಎರಡು ಎಕರೆಗೆ ₹3 ಲಕ್ಷ ಖರ್ಚು ಮಾಡಲಾಗಿದೆ. ಈಗ ಕಾಲುವೆ ನೀರು ಬಂದ್ ಆಗಿ 12 ದಿನಗಳು ಕಳೆದಿದ್ದು ಈಗ ಮೆಣಸಿನಕಾಯಿಗೆ ನೀರಿನ ಸಮಸ್ಯೆ ಎದುರಾಗಿ ಹಳ್ಳದ ನೀರು ಬಿಡುತ್ತಿದ್ದಾರೆ. ಒಂದು ಎಕರೆಗೆ 15 ರಿಂದ 20 ಕ್ವಿಂಟಾಲ್ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT