ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ಅಸ್ಮಿತೆ, ಬಸವಣ್ಣವರ ಹಿರಿಮೆಗೆ ತಂದ ಕಳಂಕ: ಜಿಗ್ನೇಶ ಮೇವಾನಿ

Published 3 ಮೇ 2024, 1:50 IST
Last Updated 3 ಮೇ 2024, 1:50 IST
ಅಕ್ಷರ ಗಾತ್ರ

ಕಲಬುರಗಿ: ‘ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯು ಕರ್ನಾಟಕದ ಅಸ್ಮಿತೆ, ಕರ್ನಾಟಕದ ಗೌರವ, ಬಸವಣ್ಣನವರ ಹಿರಿಮೆಗೆ ಕಳಂಕ ತಂದಿದ್ದಾರೆ. ಜನರು ಅವರಿಗೆ ರಾಜ್ಯದಲ್ಲಿ ನೆಲೆ ನೀಡಬಾರದು’ ಎಂದು ಗುಜರಾತ್‌ ಶಾಸಕ, ಸಾಮಾಜಿಕ ಹೋರಾಟಗಾರ ಜಿಗ್ನೇಶ ಮೇವಾನಿ ಒತ್ತಾಯಿಸಿದರು.

ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಸಮುದಾಯಗಳೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜ್ವಲ್‌ ರೇವಣ್ಣ ನಡೆಸಿದ್ದು ಇಡೀ ವಿಶ್ವದ ಅತಿದೊಡ್ಡ ಲೈಂಗಿಕ ಹಗರಣವಾಗಿದೆ. ಇಡೀ ಜಗತ್ತಿನಲ್ಲಿ ಇದಕ್ಕಿಂತಲೂ ದೊಡ್ಡ ಲೈಂಗಿಕ ಹಗರಣ ನಡೆದಿಲ್ಲ. ಆತ 16 ವರ್ಷದ ಬಾಲಕಿಯಿಂದ ಹಿಡಿದು, ತಮ್ಮ ತಾಯಿ, ಅಜ್ಜಿಯ ವಯಸ್ಸಿನ 65 ವರ್ಷದ ಮಹಿಳೆಯರನ್ನೂ ಬಿಟ್ಟಿಲ್ಲ. ಅವರ ಮೂರು ಸಾವಿರದಷ್ಟು ವಿಡಿಯೊಗಳು ಹರಿದಾಡುತ್ತಿವೆ’ ಎಂದು ಹರಿಹಾಯ್ದರು.

‘ಆದಾಗ್ಯೂ, ಅಂಥ ವ್ಯಕ್ತಿ ಹೆಗಲ ಮೇಲೆ ಪ್ರಧಾನಿ ಮೋದಿ ಕೈಹಾಕಿ, ಆತನ ಗುಣಗಾನ ಮಾಡುತ್ತಾರೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಕೊಡುತ್ತಾರೆ. ಚುನಾವಣಾ ಪ್ರಚಾರ ಕಾರ್ಯಕ್ರಮಕ್ಕೆ ಬಂದು ಆತನ ಪರವಾಗಿ ಮತಯಾಚಿಸುತ್ತಾರೆ’ ಎಂದು ಕಿಡಿಕಾರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT