ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | ಲೋಕಾಯುಕ್ತ ಬಲೆಗೆ ಬಿದ್ದ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳು

Published 15 ಫೆಬ್ರುವರಿ 2024, 4:22 IST
Last Updated 15 ಫೆಬ್ರುವರಿ 2024, 4:22 IST
ಅಕ್ಷರ ಗಾತ್ರ

ಕಲಬುರಗಿ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಕಚೇರಿಯ ಇಬ್ಬರು ಆಹಾರ ಸುರಕ್ಷತಾ ಅಧಿಕಾರಿಗಳು ಲಂಚ ಪಡೆಯುತ್ತಿದ್ದ ವೇಳೆ ಬುಧವಾರ ತಡರಾತ್ರಿ ಲೋಕಾಯುಕ್ತರ ಬಲೆಗೆ‌ ಬಿದ್ದಿದ್ದಾರೆ.

ಮಹಮದ್ ಮುಕ್ತಿದೀರ್ ಎಂಬುವರಿಂದ ನೀರು ಶುದ್ಧೀಕರಣ ಘಟಕದ ನವೀಕರಣ ಮಾಡಿಕೊಡಲು ₹40 ಸಾವಿರ ಲಂಚ ಪಡೆಯುವಾಗ ಆಹಾರ ಸುರಕ್ಷತಾ ಅಧಿಕಾರಿ‌ಗಳಾದ ಪರಮೇಶ್ವರ ಮಠಪತಿ ಹಾಗೂ ಕಿರಣ್ ಚಲವಾದಿ ಸಿಕ್ಕಿ ಬಿದ್ದಿದ್ದಾರೆ‌ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಜಯನಗರ ಸಮೀಪ ತಡರಾತ್ರಿ ₹40 ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಇನ್‌ಸ್ಪೆಕ್ಟರ್ ದೃವತಾರೆ ಅವರ ತಂಡ ದಾಳಿ ಮಾಡಿ, ಆರೋಪಿಗಳನ್ನು ವಶಕ್ಕೆ ಪಡೆದಿದೆ. ಆರೋಪಿಗಳ‌‌ ವಿಚಾರಣೆ ನಡೆಸಲಾಗುತ್ತಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT