ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭೀಮೆ ತಲುಪಿದ ಕೃಷ್ಣೆಯ ನೀರು

Published 1 ಏಪ್ರಿಲ್ 2024, 6:18 IST
Last Updated 1 ಏಪ್ರಿಲ್ 2024, 6:18 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ನಾರಾಯಣಪುರ ಜಲಾಶಯದಿಂದ ಹರಿ ಬಿಡಲಾದ ನೀರು ಭಾನುವಾರ ಭೀಮಾ ನದಿಯ ಒಡಲು ತಲುಪಿತು.

ಮಾರ್ಚ್‌ 27ರಂದು ಕೃಷ್ಣಾ ನದಿಯ ನೀರನ್ನು ನಾರಾಯಣಪುರ ಜಲಾಶಯದಿಂದ ಕೆಬಿಜೆಎನ್‌ಎಲ್‌ನ ಇಂಡಿ ಶಾಖಾ ಕಾಲುವೆ ಮೂಲಕ 1 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿತ್ತು. ಭಾನುವಾರ ಸಂಜೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಮಿರಗಿ ಸಮೀಪದ ಭೀಮಾ ನದಿ ಸೇರಿದ ಕೃಷ್ಣೆಯ ನೀರು, ಕಲಬುರಗಿ ಗಡಿಯತ್ತ ಸಾಗಿ, ತಡರಾತ್ರಿ ಅಫಲಜಲಪುರದ ಸೊನ್ನ ಭೀಮಾ ಬ್ಯಾರೇಜ್‌ ತಲುಪಿತು.

ಅನಗತ್ಯ ನೀರು ಪೋಲು ತಡೆಯಲು ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಏಪ್ರಿಲ್ 8ರವರೆಗೆ ಯಡ್ರಾಮಿಯ ವಿತರಣಾ ಕಾಲುವೆ ಹಾಗೂ ಅಫಜಲಪುರದ ಭೀಮಾ ನದಿ ದಂಡೆಯ ಸುತ್ತ ಕಲಂ 144ರಂತೆ 100 ಅಡಿ ನಿಷೇಧಿತ ಪ್ರದೇಶವೆಂದು ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT