ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ– ಬೆಂಗಳೂರು ವಾರದ ವಿಶೇಷ ರೈಲು: ವಾರದಲ್ಲಿ ಮೂರು ದಿನ ಸಂಚಾರ

Published 16 ಏಪ್ರಿಲ್ 2024, 16:33 IST
Last Updated 16 ಏಪ್ರಿಲ್ 2024, 16:33 IST
ಅಕ್ಷರ ಗಾತ್ರ

ಕಲಬುರಗಿ: ಕಲಬುರಗಿಯಿಂದ ನೇರವಾಗಿ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ಸಮೀಪದ ಸರ್‌ ಎಂ. ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಸಂಚರಿಸುವ ಎಸ್‌ಎಂವಿಬಿ–ಕೆಎಲ್‌ಬಿಜಿ ವಾರದ ವಿಶೇಷ ರೈಲು ಇನ್ನು ಮುಂದೆ ವಾರದಲ್ಲಿ ಮೂರು ದಿನಗಳು ಓಡಾಡಲಿದೆ.

ಫೆಬ್ರುವರಿ 28ರಂದು ಚಾಲನೆಗೊಂಡಿದ್ದ ಎಸ್‌ಎಂವಿಬಿ–ಕೆಎಲ್‌ಬಿಜಿ ವಾರದ ವಿಶೇಷ ರೈಲು (06589/06590), ಏಪ್ರಿಲ್ 12ರಿಂದ ಅಧಿಕೃತವಾಗಿ ಸಂಚಾರ ಆರಂಭಿಸಿತ್ತು.

ಸಂಚಾರ ಆರಂಭಿಸಿದ್ದ ಮೊದಲನೇ ದಿನದಲ್ಲಿ ‘ಭರ್ತಿಯಾಗಿ ಓಡಿದ ವಾರದ ವಿಶೇಷ ರೈಲು’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ಯ ಏಪ್ರಿಲ್ 14ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ಪ್ರಯಾಣಿಕರಿಂದ ವಾರದ ವಿಶೇಷ ರೈಲಿಗೆ ದೊರೆತ್ತಿರುವ ಅಭೂತಪೂರ್ವ ಬೆಂಬಲ ಕಂಡು ರೈಲ್ವೆ ಇಲಾಖೆಯು ವಾರದಲ್ಲಿ ಮೂರು ದಿನಗಳನ್ನು ಓಡಿಸಲು ನಿರ್ಧರಿಸಿದೆ.

ಈ ಹಿಂದಿ ನಿಗದಿಯಾಗಿದ್ದ ಬೆಂಗಳೂರಿನಿಂದ ಶುಕ್ರವಾರ ಹಾಗೂ ಕಲಬುರಗಿಯಿಂದ ಶನಿವಾರದ ಸಂಚಾರದ ಜತೆಗೆ ಪ್ರತಿ ಭಾನುವಾರ ಮತ್ತು ಮಂಗಳವಾರ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಿಂದ ರಾತ್ರಿ 11ಕ್ಕೆ ಹೊರಟು ರೈಲು, ಮರುದಿನ ಬೆಳಿಗ್ಗೆ 9.05ಕ್ಕೆ ಕಲಬುರಗಿ ತಲುಪಲಿದೆ. ಕಲಬುರಗಿಯಿಂದ ಸೋಮವಾರ ಹಾಗೂ ಬುಧವಾರ ಸಂಜೆ 5.10ಕ್ಕೆ ಹೊರಟು ರೈಲು, ಮರುದಿನ ಬೆಳಿಗ್ಗೆ 4.15ಕ್ಕೆ ಬೆಂಗಳೂರಿನ ಬೈಯಪ್ಪನಹಳ್ಳಿ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ವಾರದ ವಿಶೇಷ ರೈಲು ಭರ್ತಿಯಾಗಿ ಓಡಾಡುತ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಚುನಾವಣಾ ಪ್ರಚಾರದ ಮಧ್ಯೆಯೂ ಸಂಚಾರದ ದಿನಗಳಲ್ಲಿ ಹೆಚ್ಚಳ ಮಾಡುವಂತೆ ರೈಲು ಇಲಾಖೆಗೆ ಸತತ ಒತ್ತಡ ಹೇರಿದ್ದೆ. ಅದರ ಪರಿಣಾಮವಾಗಿ ರೈಲು ಇಲಾಖೆಯು ಆದೇಶ ಹೊರಡಿಸಿ, ಎರಡು ದಿನಗಳನ್ನು ಹೆಚ್ಚುವರಿಯಾಗಿ ಓಡಿಸಲು ಸಮ್ಮತಿಸಿದೆ’ ಎಂದು ಸಂಸದ ಡಾ.ಉಮೇಶ ಜಾಧವ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT