ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲಬುರಗಿ | 'ಕೃತಕ ಬುದ್ಧಿಮತ್ತೆ ವಿಷಯದ ಕಾರ್ಯಾಗಾರ'

Published 30 ಮೇ 2024, 16:00 IST
Last Updated 30 ಮೇ 2024, 16:00 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ಮತ್ತು ಇನ್ಸ್ಟ್ರುಮೆಂಟೇಶನ್‌ ವಿಭಾಗದಿಂದ ಐಎಸ್‌ಟಿಇ ಮತ್ತು ಐಇಟಿಇ ಸಂಸ್ಥೆಗಳ ಸಹಯೋಗದಲ್ಲಿ ‘ಎಂಜಿನಿಯರ್‌ಗಳಿಗೆ ಕೃತಕ ಬುದ್ಧಿಮತ್ತೆ ಮತ್ತು ಡೇಟಾ ವಿಜ್ಞಾನದ ಅಗತ್ಯ’ ಎಂಬ ವಿಷಯದ ಕುರಿತ ಒಂದು ವಾರದ ಕಾರ್ಯಾಗಾರದ ಉದ್ಘಾಟನೆ ಗುರುವಾರ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ಹೈದರಾಬಾದ್‌ನ ಎಐ ಎಂಟರಪ್ರೈಸ್‌ ಆರ್ಕಿಟೆಕ್ಟ್‌ನ ಸಿಇಒ ಮತ್ತು ನಿರ್ದೇಶಕ ಎಂಜಿನಿಯರ್ ಜುಬೇರ್ ಶೇಖ್ ಮಾತನಾಡಿ, ‘ಕೃತಕ ಬುದ್ಧಿಮತ್ತೆ (ಎಐ) ಎನ್ನುವುದು ಕಂಪ್ಯೂಟರ್‌ಗಳು ವಿವಿಧ ಸುಧಾರಿತ ಕಾರ್ಯಗಳನ್ನು ನಿರ್ವಹಿಸಲು ಅನುವು ಮಾಡಿಕೊಡುವ ತಂತ್ರಜ್ಞಾನಗಳ ಗುಂಪಾಗಿದ್ದು, ಮಾತನಾಡುವ ಮತ್ತು ಲಿಖಿತ ಭಾಷೆಯನ್ನು ನೋಡುವ, ಅರ್ಥಮಾಡಿಕೊಳ್ಳುವ ಮತ್ತು ಭಾಷಾಂತರಿಸುವ ಸಾಮರ್ಥ್ಯ, ಡೇಟಾವನ್ನು ವಿಶ್ಲೇಷಿಸುವುದು, ಶಿಫಾರಸು ಮತ್ತಿತರ ಕೆಲಸ ಮಾಡುತ್ತದೆ’ ಎಂದರು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ರಾಜಾ ಭೀಮಳ್ಳಿ ಮಾತನಾಡಿ, ‘ಆಧುನಿಕ ಜಗತ್ತಿಗೆ ಬೇಕಾಗುವಂತಹ ಕೃತಕ ಬುದ್ಧಿಮತ್ತೆಯಂತಹ ತಂತ್ರಜ್ಞಾನದ ಕುರಿತ ಯಾವುದೇ ಕಾರ್ಯಕ್ರಮಗಳಿದ್ದರೂ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಸದಾ ಬೆಂಬಲ ನೀಡುತ್ತದೆ’ ಎಂದರು.

ಕಾಲೇಜಿನ ಪ್ರಾಚಾರ್ಯ ಪ್ರೊ. ಶಶಿಕಾಂತ್ ಆರ್. ಮೀಸೆ, ಉಪ ಪ್ರಾಚಾರ್ಯೆ (ಆಡಳಿತ) ಶ್ರೀದೇವಿ ಸೋಮಾ, ಉಪಪ್ರಚಾರ್ಯ ಎಸ್‌.ಆರ್‌. ಹೊಟ್ಟಿ, ಪ್ರೊ. ಕಲ್ಪನಾ ವಂಜರಖೇಡೆ ,ಪ್ರೊ. ಚನ್ನಪ್ಪ ಭೈರಿ ಪ್ರೊ. ಪಾರ್ವತಿ ಕಣಕಿ, ಆನಂದ ಹೊಸಮನಿ, ಕಾಶಯ್ಯ ಧರ್ಮರಾಜ್ ಮಲ್ಕಪುಗೋಳ, ಚಂದ್ರಕಾಂತ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಡೀನ್‌ಗಳು, ಪ್ರಾಧ್ಯಾಪಕರು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

ಸಂಚಾಲಕ ಮತ್ತು ಎಲೆಕ್ಟ್ರಾನಿಕ್ಸ್ ಅಂಡ್‌ ಇನ್ಸ್ಟ್ರುಮೆಂಟೇಶನ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಸಂಜಯ್ ಮಾಕಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಯೋಜಕ ಸಂದೀಪ್ ಕುಲಕರ್ಣಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಪ್ರೊ. ರಫಿಯಾ ಕೆ. ವಂದಿಸಿದರು.

ಪ್ರೊ. ಮೀನಾಕ್ಷಿ ಪಾಟೀಲ ನಿರೂಪಿಸಿದರು. ಕಲಬುರಗಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಸುಮಾರು 80 ಜನರು ಈ  ಕಾರ್ಯಗಾರದಲ್ಲಿ ನೋಂದಣಿ ಮಾಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT