ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗವಿಕಲರಿಗೆ ಅವಕಾಶ ನೀಡಿ, ಅನುಕಂಪ ಬೇಡ: ಸಿದ್ಧಲಿಂಗ ಸ್ವಾಮೀಜಿ

Published 7 ಡಿಸೆಂಬರ್ 2023, 15:59 IST
Last Updated 7 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ವಾಡಿ: ‘ಅಂಗವಿಕಲರಿಗೆ ಅನುಕಂಪಕ್ಕಿಂತ ಅವಕಾಶಗಳನ್ನು ನೀಡಬೇಕಿದೆ. ದೈಹಿಕ ಸಾಮರ್ಥ್ಯದ ಕೊರತೆಯ ಮಧ್ಯೆಯೂ ಸಾಧನೆ ಮಾಡಿರುವವರು ಈಗ ನಮಗೆ ಆದರ್ಶವಾಗಬೇಕಾಗಿದೆ ಎಂದು ಸಿದ್ಧಲಿಂಗೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಸಮೀಪದ ರಾವೂರು ಸಚ್ಚಿದಾನಂದ ಪ್ರೌಢಶಾಲೆಯ ಎನ್‌ಸಿಸಿ ಘಟಕದ ವತಿಯಿಂದ ಈಚೆಗೆ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಎನ್.ಸಿ.ಸಿ ತರಬೇತಿ ಅಧಿಕಾರಿ ಹವಾಲ್ದಾರ ಬಲವಿಂದರ ಸಿಂಗ್, ಎನ್‌ಸಿಸಿ ಅಧಿಕಾರಿ ಶರಣು ಸಜ್ಜನ, ಮುಖ್ಯಶಿಕ್ಷಕ ವಿದ್ಯಾಧರ ಖಂಡಾಳ, ಶಿಕ್ಷಕರಾದ ಶಿವಕುಮಾರ ಸರಡಗಿ, ಭಾರತಿ ಪರೀಟ, ಅನಿಲ, ತಾಯಪ್ಪ ಗುದಗಲ ಇದ್ದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಗವಿಕಲರ ಕುರಿತು ಅರಿವು ಮೂಡಿಸುವ ಜಾಥಾ ಹಮ್ಮಿಕೊಳ್ಳಲಾಯಿತು. ಎನ್.ಸಿ.ಸಿ ಮಕ್ಕಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT