ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಡಗಿನ ವಿಶೇಷ ಅಕ್ಕಿರೊಟ್ಟಿ, ನಾಟಿ ಕೊಳಿ ಸಾರು, ಕಡುಬಿಟ್ಟು ಸವಿದ ಸಿದ್ದರಾಮಯ್ಯ

ಮುಖ್ಯಮಂತ್ರಿಗೆ ಊಟ ಬಡಿಸಿದ ಶಾಸಕ ಎ.ಎಸ್.ಪೊನ್ನಣ್ಣ
Published 25 ಜನವರಿ 2024, 12:01 IST
Last Updated 25 ಜನವರಿ 2024, 12:01 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ವಿರಾಜಪೇಟೆಯ ಸಂತ ಅನ್ನಮ್ಮ ಸಭಾಂಗಣದಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಆಹಾರ ಬಡಿಸಿದರು.

ಕೊಡಗಿನ ವಿಶೇಷ ಸಾಂಪ್ರದಾಯಿಕ ಆಹಾರವಾದ ಅಕ್ಕಿರೊಟ್ಟಿ, ನಾಟಿ ಕೊಳಿ ಸಾರು, ಕಡುಬಿಟ್ಟು, ರಾಗಿಮುದ್ದೆ, ನೂಲುಪುಟ್ಟು ಅದರಲ್ಲಿ‌ ಸೇರಿತ್ತು.

ಮಧ್ಯಾಹ್ನ ಆರಂಭವಾಗಬೇಕಿದ್ದ ಸಭೆ ಸಂಜೆ ಆರಂಭ

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಆರಂಭವಾಗಬೇಕಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಸಂಜೆ ಆರಂಭವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ಗಂಟೆಯಷ್ಟು ತಡವಾಗಿ ಬಂದಿದ್ದಾರೆ.

ಸಭೆ ಆರಂಭಕ್ಕೆ ಮುನ್ನ ಸಂವಿಧಾನ ಪೀಠಿಕೆಯನ್ನು ಓದಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT