ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಡಿಕೇರಿ | ಧ್ವನಿ ಅಡಗಿಸುವ ಕೆಲಸ; ಬಿಜೆಪಿ ಅಕ್ರೋಶ

Published 15 ಫೆಬ್ರುವರಿ 2024, 7:16 IST
Last Updated 15 ಫೆಬ್ರುವರಿ 2024, 7:16 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧ್ವನಿ ಅಡಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್‌ ಜೈನಿ ಆಕ್ರೋಶ ವ್ಯಕ್ತಪಡಿಸಿದರು.

ಈಗಿನ ಶಾಸಕರು ಇಲ್ಲಿಯವರೆಗೆ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶ್ನಿಸುವುದು ತಪ್ಪೇ ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಾಮಾನ್ಯ ಜನರ ಧ್ವನಿಯಾಗಿ ಬಿಜೆಪಿ ಕಾರ್ಯಕರ್ತರು ಇಲ್ಲಿನ ಶಾಸಕರ ಕಚೇರಿಗೆ ಹೋಗಿ ಏನೇನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೀರಿ ಎಂದು ಪತ್ರದ ಮುಖೇನ ಮಾಹಿತಿ ಕೇಳಿದ್ದಾರೆ. ಹಾಗೆಯೇ, ರಾಜ್ಯದ ಎಲ್ಲ ಶಾಸಕರ ಕಚೇರಿಗೂ ಭೇಟಿ ನೀಡಿ ಕೇಳಲಾಗಿದೆ. ಇದನ್ನು ಸರಿಯಲ್ಲ ಎಂದು ವೀಣಾ ಅಚ್ಚಯ್ಯ ಹೇಳಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ಬಿಜೆಪಿ ವಕ್ತಾರ ಟಿ.ಎ.ಕಿಶೋರ್‌ಕುಮಾರ್ ಮಾತನಾಡಿ, ‘ಹಿಂದೆ ನಮ್ಮ ಶಾಸಕರು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತ್ತೆ ಭೂಮಿಪೂಜೆ ಮಾಡುವುದು, ಒಂದೇ ರಸ್ತೆಯನ್ನು ಎರಡು ಬಾರಿ ಉದ್ಘಾಟಿಸುವಂತಹ ಕೆಲಸಗಳನ್ನೇ ಈಗಿನ ಶಾಸಕರು ಮಾಡಿದ್ದಾರೆ. ಬಿಜೆಪಿಯ ಹಿಂದಿನ ಇಬ್ಬರು ಶಾಸಕರು ಮಾಡಿರುವ ಕೆಲಸಗಳ ಬಗ್ಗೆ ಶ್ವೇತಪತ್ರ ಹೊರಡಿಸಲಾಗಿದೆ’ ಎಂದರು.

ಪಕ್ಷದ ವಕ್ತಾರ ಸುಬ್ರಹ್ಮಣ್ಯ ಉಪಾಧ್ಯಾಯ ಮಾತನಾಡಿ, ‘ವಿಧಾನ ಪರಿಷತ್ ಸದಸ್ಯೆಯಾಗಿದ್ದ ವೀಣಾ ಅಚ್ಚಯ್ಯ ಅವರು ಜವಾಬ್ದಾರಿಯಿಂದ ಮಾತನಾಡಬೇಕಿತ್ತು. ಅವರು ಸದಸ್ಯರಾಗಿದ್ದ ಅವಧಿಯಲ್ಲಿ ನಮ್ಮ ಶಾಸಕರು ಮಾಡಿದ್ದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಗೊತ್ತಿದ್ದರೂ ಗೊತ್ತಿಲ್ಲ ಎಂದು ಹೇಳುವುದು ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ಉಮೇಶ್ ಸುಬ್ರಮಣಿ, ಪ್ರಶಾಂತ್, ಬಿ.ಕೆ.ಅರುಣ್ ಕುಮಾರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT