ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಮಧ್ಯೆ ದಲಿತ ಮುಖಂಡನ ಜನ್ಮದಿನ ಆಚರಣೆ; ಪ್ರಕರಣ ದಾಖಲು

Published 21 ಮೇ 2024, 16:32 IST
Last Updated 21 ಮೇ 2024, 16:32 IST
ಅಕ್ಷರ ಗಾತ್ರ

ಕೋಲಾರ: ದಲಿತ ಮುಖಂಡರೊಬ್ಬರ ಜನ್ಮದಿನವನ್ನು ರಸ್ತೆಯಲ್ಲಿ ಆಚರಿಸಿದ ಹಿನ್ನೆಲೆಯಲ್ಲಿ ಹಲವು ಸಂಘಟನೆಗಳ ಮುಖಂಡರ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಲಾಗಿದೆ.

ದಲಿತ ಮುಖಂಡ ಬೆಳಮಾರನಹಳ್ಳಿ ಆನಂದ್ ಅವರ ಜನ್ಮದಿನವನ್ನು ನಗರದ ಡೂಂಲೈಟ್ ವೃತ್ತದಲ್ಲಿ ಸೋಮವಾರ (ಮೇ 20) ರಾತ್ರಿ ಪಟಾಕಿ ಸಿಡಿಸಿ, ಕೇಕ್ ಕತ್ತರಿಸಿ ಆಚರಣೆ ಮಾಡಲಾಗಿತ್ತು. ಆನಂದ್ ಹಿಂಬಾಲಕ ಬಸವನತ್ತ ರವಿಕುಮಾರ್ ಎಂಬುವರು ಆಯೋಜನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ‌ಚಂಬೆ ರಾಜೇಶ್, ಪೇಟೆಚಾಮನಹಳ್ಳಿ ಸುಬ್ಬು, ಕೆಎಚ್‌ಬಿ ಕಾಲೊನಿಯ ಆಟೋ ಶಿವು, ಹಾರೋಹಳ್ಳಿ ಆನಂದ್, ದೊಡ್ಡೂರು ಕರಪನಹಳ್ಳಿ ಅಂಬರೀಶ್ ಮತ್ತಿತರರು ಪಾಲ್ಗೊಂಡಿದ್ದರು.

ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರ ಮತ್ತು ವಾಹನಗಳ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡಿ ರಸ್ತೆಯ ಮಧ್ಯದಲ್ಲಿ ಪಟಾಕಿ ಸಿಡಿಸಿಸಲಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾಧಿಕಾರಿಯಿಂದ ಅಥವಾ ಸಂಬಂಧಪಟ್ಟವರಿಂದ ಯಾವುದೇ ಅನುಮತಿ ಪಡೆಯದೆ ಸಾರ್ವಜನಿಕರ ಶಾಂತಿ ಮತ್ತು ನೆಮ್ಮದಿಗೆ ಭಂಗವನ್ನುಂಟು ಮಾಡಲಾಗಿದೆ. ಕಲುಷಿತ ವಾತಾವರಣ ನಿರ್ಮಿಸಿದ ಆರೋಪದ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT