ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಳಬಾಗಿಲು: ರಕ್ತಚಂದನ ಕಳ್ಳರ ಬಂಧನ

Published 13 ಜನವರಿ 2024, 12:55 IST
Last Updated 13 ಜನವರಿ 2024, 12:55 IST
ಅಕ್ಷರ ಗಾತ್ರ

ಮುಳಬಾಗಿಲು: ತಾಲ್ಲೂಕಿನ ಗುಡಿಪಲ್ಲಿ ಬಳಿ ರಕ್ತ ಚಂದನ ಕಳವು ಮಾಡಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದ ಕಳ್ಳರನ್ನು ನಂಗಲಿ ಪೊಲೀಸರು ಬಂಧಿಸಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ. 

ನೆರೆ ಆಂಧಪ್ರದೇಶದ ಚಿತ್ತೂರು ಜಿಲ್ಲೆ ಜಾನಕಾರಿಪಲ್ಲಿ ಗ್ರಾಮದ ಇಮ್ರಾನ್ ಮತ್ತು ವಹಾಬ್ ಬಂಧಿತರು. ಬಂಧಿತ ಆರೋಪಿಗಳು ಕಾರಿನಲ್ಲಿ ₹35 ಲಕ್ಷ ಬೆಲೆ ಬಾಳುವ 750ಕೆಜಿ ತೂಕದ 31 ರಕ್ತ ಚಂದನ ತುಂಡುಗಳನ್ನು ಆಂಧ್ರಪ್ರದೇಶದ ಕಾಡುಗಳಲ್ಲಿ ಕಳ್ಳತನ ಮಾಡಿಕೊಂಡು ರಾಮಸಮುದ್ರಂ ಮತ್ತು ಪುಂಗನೂರು ರಸ್ತೆ ಮೂಲಕ ಬೆಂಗಳೂರಿನಲ್ಲಿ ಮಾರಾಟ ಮಾಡಲು ಹೋಗುತ್ತಿದ್ದಾಗ ಪೊಲೀಸರ ತಪಾಸಣೆ ವೇಳೆ ಸಿಕ್ಕಿ ಬಿದ್ದಿದ್ದಾರೆ.

ಪುಷ್ಪ ಸಿನಿಮಾ ಮಾದರಿಯಲ್ಲಿ ಸಾಗಾಟ: ಆರೋಪಿಗಳು ಬೊಲೆರೋ ಪಿಕಪ್ ವಾಹನದ ಕ್ಯಾಬಿನ್‌ನಲ್ಲಿ ಮರದ ಹಲಗೆಗಳಿಂದ ಬೀಡಿಂಗ್‌ ಕಟ್ಟಿ ಯಾರಿಗೂ ಕಾಣದಂತೆ ರಕ್ತಚಂದನ ತುಂಡುಗಳನ್ನು ಜೋಡಿಸಿ ಅದರ ಮೇಲೆ ಟೊಮೆಟೊ ಬಾಕ್ಸ್‌ ಇಟ್ಟು ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಳ್ಳರು ರಕ್ತ ಚಂದನ ಸಾಗಿಸುತ್ತಿದ್ದರು. ರಕ್ತಚಂದನ ಸಾಗಿಸುತ್ತಿದ್ದ ಕಾರಿನ ಹಿಂದೆ, ಮುಂದೆ ಮತ್ತೆರಡು ಕಾರುಗಳು ಬರುತ್ತಿದ್ದಾಗ ಅನುಮಾನಗೊಂಡ ಪೊಲೀಸರು ತಪಾಸಣೆ ನಡೆಸಿದಾಗ ಸಿಕ್ಕಿಬಿದ್ದಿದ್ದಾರೆ.

ತಮಿಳುನಾಡಿನ ಪುನ್ನಮಲ್ಲಿ ರಮೇಶ್, ಅರುಣ್, ಆಂಧ್ರಪ್ರದೇಶದ ರಾಮಕುಪ್ಪಂನ ಅರಣ್ಯ ಸಿಬ್ಬಂದಿ ಬಾಬು ಎಂಬುವರು ಪರಾರಿಯಾಗಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾರ್ಗದರ್ಶನ ಮತ್ತು ಗ್ರಾಮಾಂತರ ವೃತ್ತ ನಿರೀಕ್ಷಕ ಸತೀಶ್ ಸೂಚನೆಯಂತೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅರ್ಜುನ್ ಗೌಡ, ಸಿಬ್ಬಂದಿ ಅಮರ್, ವಿಜಯ್ ಕುಮಾರ್, ಪ್ರಶಾಂತ್, ಎ.ಎಸ್.ಐ ರಾಮಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT