ಸೋಮವಾರ, ಸೆಪ್ಟೆಂಬರ್ 26, 2022
22 °C

ಗಂಗಾವತಿ: ಡಾ. ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಂಗಾವತಿ (ಕೊಪ್ಪಳ ಜಿಲ್ಲೆ): ಗಂಗಾವತಿಯ ಅಂಬೇಡ್ಕರ್ ನಗರದಲ್ಲಿ ವಿನಾಯಕ ಸ್ನೇಹವೃಂದ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಡಾ. ಅಂಬೇಡ್ಕರ್ ರೂಪದ ಗಣೇಶ ಮೂರ್ತಿಗೆ ದಲಿತ ಒಕ್ಕೂಟಗಳು ವಿರೋಧ ವ್ಯಕ್ತಪಡಿಸಿವೆ.

ಸಂಘಟಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗುರುವಾರ ಪೊಲೀಸ್ ಠಾಣೆ ಮೆಟ್ಟಿಲೇರಿವೆ.

‘ಅಂಬೇಡ್ಕರ್ ಅವರ ರೂಪ ಹೋಲುವ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದು ಸರಿಯಲ್ಲ. ಇದರಿಂದ ಅವರ ಘನತೆಗೆ ಧಕ್ಕೆ ಉಂಟಾಗಿದೆ. ಮೂರ್ತಿಯನ್ನು ಕೊನೆಯದಾಗಿ ನೀರಿಗೆ ವಿಸರ್ಜನೆ ಮಾಡಲಾಗುತ್ತದೆ. ಇದು ಸಂವಿಧಾನ ಶಿಲ್ಪಿಗೆ ಮಾಡಿದ ಅವಮಾನ’ ಎಂದು ಒಕ್ಕೂಟದ ಮುಖಂಡರಾದ ಕುಂಟೋಜಿ ಮರಿಯಪ್ಪ ಹೇಳಿದರು.

ಸದಸ್ಯರಾದ ದೊಡ್ಡ ಬೋಜಪ್ಪ, ಸಿ.ಕೆ.ಮರಿಸ್ವಾಮಿ, ಹನುಮಂತಪ್ಪ, ಪೂಜಾರಿ ಬಸವರಾಜ, ಹಂಚಿನಾಳ ಹುಸೇನಪ್ಪ, ಮಾಗಿ ಹುಲಗಪ್ಪ, ಕಂಟ್ಯಪ್ಪ, ರವಿ ಆರತಿ , ಸಣ್ಣ ಬೋಜಪ್ಪ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು