ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿಎಸ್‌ಸಿ: ವಿಜಯಪುರ ಜಿಲ್ಲೆಯ 16 ಜನರು ಆಯ್ಕೆ

Last Updated 24 ಡಿಸೆಂಬರ್ 2019, 14:45 IST
ಅಕ್ಷರ ಗಾತ್ರ

ವಿಜಯಪುರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) 428 ಹುದ್ದೆಗಳಿಗೆ ನಡೆಸಿದ ಪರೀಕ್ಷೆಯಲ್ಲಿ ಜಿಲ್ಲೆಯ 16 ಮಂದಿ ತೇರ್ಗಡೆ ಹೊಂದಿದ್ದಾರೆ.

ಉಪ ವಿಭಾಗಾಧಿಕಾರಿ (ಎಸಿ) ಒಬ್ಬರು, ಡಿವೈಎಸ್‌ಪಿ (ಅಬಕಾರಿ) ಒಬ್ಬರು, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು ಇಬ್ಬರು, ತಹಶೀಲ್ದಾರ್ ಗ್ರೇಡ್–2 ಮೂರು ಜನ, ವಾಣಿಜ್ಯ ತೆರಿಗೆ ಅಧಿಕಾರಿ ಐದು ಜನ, ಆಹಾರ, ಗ್ರಾಹಕರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯ ನಿರ್ದೇಶಕ ಒಬ್ಬರು, ಸಹಕಾರ ಇಲಾಖೆ ಸಹಾಯಕ ನೋಂದಣಾಧಿಕಾರಿ ಮೂರು ಜನ ಸೇರಿದಂತೆ ಒಟ್ಟು 16 ಜನರು ಅರ್ಹತೆ ಪಡೆದಿದ್ದಾರೆ.

ಉಪ ವಿಭಾಗಾಧಿಕಾರಿ: ಸಿಂದಗಿ ತಾಲ್ಲೂಕು ಬಗಲೂರ ಗ್ರಾಮದ ಬಸವಣ್ಣೆಪ್ಪ ಕಲಶೆಟ್ಟಿ.

ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತರು: ಬಸವನಬಾಗೇವಾಡಿ ತಾಲ್ಲೂಕು ಹೂವಿನಹಿಪ್ಪರಗಿಯ ಶಾಂತಗೌಡ ಎಸ್.ಗುಣಕಿ, ಇಂಡಿ ತಾಲ್ಲೂಕು ಬಳ್ಳೊಳ್ಳಿ ಗ್ರಾಮದ ಶ್ರೀದೇವಿ ಶ್ರೀಮಂತ ತೇಲಿ.

ತಹಶೀಲ್ದಾರ್ ಗ್ರೇಡ್–2: ಇಂಡಿ ತಾಲ್ಲೂಕು ನಿವರಗಿ ಗ್ರಾಮದ ವಿನೋದ ಲಕ್ಷ್ಮಣ ಹತ್ತಳ್ಳಿ, ಶಿರಕನಹಳ್ಳಿ ಗ್ರಾಮದ ಬಸವರಾಜ ತೆನ್ನಾಲಿ, ಮುದ್ದೇಬಿಹಾಳ ಪಟ್ಟಣದ ಪ್ರಶಾಂತ ಪಾಟೀಲ.

ವಾಣಿಜ್ಯ ತೆರಿಗೆ ಅಧಿಕಾರಿ: ವಿಜಯಪುರ ತಾಲ್ಲೂಕು ಹಿಟ್ಟಿನಹಳ್ಳಿ ಗ್ರಾಮದ ಸಂತೋಷ ಗೋಲಾಯಿ, ಮುದ್ದೇಬಿಹಾಳ ತಾಲ್ಲೂಕು ಘಾಳಾಪೂಜಿ ಗ್ರಾಮದ ಸಂಗಣ್ಣ ಜುಲಗುಡ್ಡ, ಸಿಂದಗಿ ತಾಲ್ಲೂಕು ಮಮತಾಜ್ ಬಿ.ವಾಲೀಕಾರ, ಬಸವನಬಾಗೇವಾಡಿ ತಾಲ್ಲೂಕು ಮನಗೂಳಿ ಗ್ರಾಮದ ದೀಪಕ ಪಿ.ಅವಟಗೇರಿ, ವಿಜಯಪುರ ನಗರದ ಅಶ್ವಿನಿ ಪಾಟೀಲ, ಸಂತೋಷ ಆರ್.

ಅಬಕಾರಿ ಡಿವೈಎಸ್‌ಪಿ: ವಿಜಯಪುರ ನಗರದ ಅಶೋಕ ಪೂಜಾರಿ.

ಆಹಾರ, ಗ್ರಾಹಕರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಹಾಯ ನಿರ್ದೇಶಕ: ಇಂಡಿ ಪಟ್ಟಣದ ರಶ್ಮಿ ತೇಲಿ.

ಸಹಕಾರ ಇಲಾಖೆ ಸಹಾಯಕ ನೋಂದಣಾಧಿಕಾರಿ: ವಿಜಪುರ ನಗರದ ಎಸ್.ಕೆ.ಭಾಗ್ಯಶ್ರೀ, ವಿಜಯಪುರ ತಾಲ್ಲೂಕು ಬಬಲಾದ ಗ್ರಾಮದ ದಾನಯ್ಯ ಹಿರೇಮಠ, ಇಂಡಿ ತಾಲ್ಲೂಕು ಅಥರ್ಗಾ ಗ್ರಾಮದ ರಮೇಶ ಗಣಪತಿ ಬಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT