ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಎರಡು ದಿನ ಸಿಇಟಿ ಪರೀಕ್ಷೆ

1152 ವಿದ್ಯಾರ್ಥಿಗಳು ಭಾಗಿ
Published 17 ಏಪ್ರಿಲ್ 2024, 18:32 IST
Last Updated 17 ಏಪ್ರಿಲ್ 2024, 18:32 IST
ಅಕ್ಷರ ಗಾತ್ರ

ಕೆ.ಆರ್.ಪೇಟೆ: ‘ಪಟ್ಟಣದ ಎರಡು ಕಾಲೇಜಿನಲ್ಲಿ ಏ.18, 19 ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು 1,152 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ, ಸರ್ಕಾರಿ ಪಿಯು ಕಾಲೇಜುಗಳ ನೋಡಲ್ ಕೇಂದ್ರದ ಪ್ರಾಂಶುಪಾಲ ಕೆ.ಮೋಹನ್ ಮಾಹಿತಿ ನೀಡಿದರು.

‘ಏ.18 ಮತ್ತು 19 ರಂದು ಪಟ್ಟಣದ ಹೊಸಹೊಳಲು ರಸ್ತೆಯಲ್ಲಿರುವ ಜೂನಿಯರ್ ಕಾಲೇಜು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯಲಿದೆ. ಜೂನಿಯರ್ ಕಾಲೇಜಿನಲ್ಲಿ 672 ವಿದ್ಯಾರ್ಥಿಗಳು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 480 ವಿದ್ಯಾರ್ಥಿಗಳು ಪರಿಕ್ಷೆ ಬರೆಯಲಿದ್ದಾರೆ. ಎರಡೂ ಕೇಂದ್ರಗಳಲ್ಲಿ ಪರಿಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಸಕಲ ವ್ಯವಸ್ಥೆ ಮಾಡಲಾಗಿದೆ’ ಎಂದರು.

‘ವಿದ್ಯಾರ್ಥಿಗಳು ಬೆಳಿಗ್ಗೆ 10, ಮಧ್ಯಾಹ್ನ 2 ಗಂಟೆಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ಎಲೆಕ್ಟ್ರಾನಿಕ್ ವಸ್ತು, ವಾಚ್, ಮೊಬೈಲ್, ಕ್ಯಾಲ್ಯುಕ್ಯುಲೇಟರ್, ಮಹಿಳಾ ವಿದ್ಯಾರ್ಥಿಗಳು ಮಾಂಗಲ್ಯ ಹೊರತುಪಡಿಸಿ ಯಾವುದೇ ಆಭರಣ ಧರಿಸುವಂತಿಲ್ಲ. ಪೂರ್ಣ ತೋಳಿನ ಅಂಗಿ, ಜೀನ್ಸ್, ಶೂ ಧರಿಸುವಂತಿಲ್ಲ’ ಎಂದು ತಿಳಿಸಿದರು.

ಈ ವೇಳೆ ಹಿರಿಯ ಉಪನ್ಯಾಸಕ ಪುಲಿಗೆರೆಯ್ಯ, ಚಂದ್ರಶೇಖರ್, ಭಾಗ್ಯ, ಪ್ರಬಾರ ಪ್ರಾಂಶುಪಾಲ ಮಂಜೇಗೌಡ, ಮಂಜುನಾಥ್ ಭಾಗವಹಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT