ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ ನಗರದಲ್ಲಿ ಕಣ್ಣು ಹಾಯಿಸಿದಷ್ಟೂ ಕಸದ ರಾಶಿ: ನಗರಭೆಗೆ ತಲೆನೋವು

ಮೋಹನ್‌ ರಾಗಿಮುದ್ದನಹಳ್ಳಿ
Published 18 ಮೇ 2024, 5:37 IST
Last Updated 18 ಮೇ 2024, 5:37 IST
ಅಕ್ಷರ ಗಾತ್ರ

ಮಂಡ್ಯ: ‘ನಗರದಲ್ಲಿ ಖಾಲಿ ನಿವೇ ಶನ, ಚರಂಡಿಯ ಬಳಿ ರಾತ್ರೋ ರಾತ್ರಿ ಕಸದ ಗುಡ್ಡೆ ಸಂಗ್ರಹವಾಗುತ್ತಿದ್ದು, ನಿವಾ ಸಿಗಳು ಮೂಗು ಮುಚ್ಚಿಕೊಂಡು ತಿರುಗಾಡುವ ಸ್ಥಿತಿ ನಿರ್ಮಾಣ ವಾಗಿದೆ. ಇದರಿಂದ, ಕಸದ ವಿಲೇವಾರಿ ನಗರಸಭೆಗೆ ತಲೆನೋವಾಗಿ ಪರಿಣಿಮಸಿದೆ.

ನಗರದ ಹೊಸಹಳ್ಳಿ, ಹಾಲಹಳ್ಳಿ, ಗಾಂಧಿನಗರ, ನೆಹರೂ ನಗರ, ಗುತ್ತಲು ಬಡಾವಣೆ, ಅನ್ನಪೂರ್ಣೆಶ್ವರಿ ನಗರ, ಮರಿಗೌಡ ಬಡಾವಣೆ, ಕ್ಯಾತಂಗೆರೆ, ಕಲ್ಲಹಳ್ಳಿ, ಕಿರಗಂದೂರು ಬಳಿ, ಶಂಕರಪುರ, ಬೀಡಿ ಕಾಲೋನಿ, ಸೆಂಟ್ರಲ್‌ ಪೊಲೀಸ್‌ ಠಾಣೆ ಸಮೀಪ, ಸಂತೆಮಾಳ, ಪೇಟೆಬೀದಿ, ಜೈನರ ಬೀದಿ ಸೇರಿದಂತೆ ನಗರದ ಹಲವೆಡೆ ರಾಶಿ ರಾಶಿ ಕಸದ ಗುಡ್ಡೆಗಳು ಕಂಡು ಬರುತ್ತಿವೆ.

‘ನಗರಸಭೆ ಸೇರಿದಂತೆ ಬೇಲೂರು, ಬೇವಿನಹಳ್ಳಿ, ಇಂಡುವಾಳು, ಹೊಳಲು ಗ್ರಾಮ ಪಂಚಾಯಿತಿಯಿಂದ ಕಸ ವಿಲೇ ವಾರಿ ವಾಹನಗಳು ಮನೆಮನೆ ಬಾಗಿಲಿಗೆ ಬರುತ್ತವೆ. ಆದರೂ ಸಹ ವಾಹನಗಳನ್ನು ನಿರ್ಲಕ್ಷ್ಯ ವಹಿಸಿರುವುದು ಸರಿಯಲ್ಲ, ಇನ್ನಾದರೂ ಸಹ ಕಸ ವಿಲೇವಾರಿ ವಾಹನಗಳನ್ನು ಬಳಸಿಕೊಂಡರೆ ಎಲ್ಲೆಡೆ ಕಸದ ಗುಡ್ಡೆ ಹಾಕುವುದನ್ನು ತಪ್ಪಿಸಬಹುದು’ ಎಂದು ನಿವಾಸಿಗಳಾದ ನೇತ್ರಾ, ಸವಿತಾ ಹೇಳುತ್ತಾರೆ.

‘ಗಾಂಧಿ ನಗರದಲ್ಲಿ ಪೌರಕಾರ್ಮಿಕರು ಬೆಳಿಗ್ಗೆಯೇ ಬಂದು ಖಾಲಿ ನಿವೇಶನ, ಚರಂಡಿ ಬಳಿ ಸುರಿದಿರುವ ಕಸದ ರಾಶಿಯನ್ನು ತುಂಬಿಕೊಂಡು ಹೋಗುತ್ತಾರೆ. ನಂತರ  ರಾತ್ರೋ ರಾತ್ರೋ ಕಸದ ಗುಡ್ಡೆ ಮತ್ತೆ ಕಾಣಿಸುತ್ತದೆ. ಕಸವನ್ನು ರಾತ್ರಿ ಸುರಿಯಲೆಂದೇ ಬರುವ ಜನರಿಗೆ ಬುದ್ದಿ ಹೇಳುವವರು ಯಾರು? ಚರಂಡಿ  ಅಲ್ಲದೇ, ಅದರೊಳಗೆ ಬಿಸಾಡಿ ಹೋಗುತ್ತಿರುವ ವ್ಯಕ್ತಿಗಳಿಗೆ ದುಬಾರಿ ದಂಡ ವಿಧಿಸಬೇಕು’ ಎಂದು ನಿವಾಸಿಗಳಾದ ಫೈರೋಜ್, ಸಹಬಾಜ್, ಫರಾಜ್ ಒತ್ತಾಯಿಸುತ್ತಾರೆ.

‘ಕಸದ ವಿಲೇವಾರಿ ವಾಹನ ಬೆಳಿಗ್ಗೆ ಬೇಗನೆ ಬರುತ್ತಿದೆ, ಆ ಸಮದಯಲ್ಲಿ ಕೆಲವರು ಮಲಗಿರುತ್ತಾರೆ, ಇನ್ನೂ ಕೆಲವರು ವಾಯು ವಿಹಾರಕ್ಕೆ ಹೋಗಿರುತ್ತಾರೆ, ಈ ಸಂದರ್ಭದಲ್ಲಿ ಕಸವಾಹನ ವಿಲೇವಾರಿ ವಾಹನಗಳು ಬಂದು ಹೋಗುತ್ತವೆ, ಹಾಗಾಗಿ ಈ ಸಮಸ್ಯೆ ಎದುರಾಗುತ್ತಿದೆ. ನಂತರ ಕೆಲವರು ಮನೆಯಲ್ಲಿರುವ ಕಸವನ್ನು ದೊಡ್ಡ ಚೀಲ, ಕವರ್‌ಗಳಲ್ಲಿ ಕಟ್ಟಿ ಕೊಂಡು ಬಂದು ಖಾಲಿ ನಿವೇಶನ ಹಾಗೂ ಜನಸಂದಣಿ ಇಲ್ಲದ ಸ್ಥಳಗಳಲ್ಲಿ ಸುರಿದು ಹೋಗುತ್ತಿದ್ದಾರೆ, ಇನ್ನೂ ಕೆಲವು ನಿವಾಸಿಗಳು ಡಬ್ಬಗಳಲ್ಲಿ ಕಸ ತುಂಬಿ ಕೊಂಡು ಬಂದು ಸುರಿದು ಹೋಗುವು ದನ್ನು ನೋಡಿದ ನಿವೇಶನ ಮಾಲೀ ಕರ ನಡುವೆ ಮಾತಿನ ಚಕಮಕಿ ನಡೆದಿ ರುವ ಘಟನೆಗಳು ನಡೆಯುತ್ತಿವೆ’ ಎಂದು ಮುಖಂಡರಾದ ಟಿ.ವರಪ್ರಸಾದ್, ವಿಜಯ್‌ ಕೀರ್ತಿ, ಶಂಕರ್‌ ಜೇಷ್ಠ ಆರೋಪಿಸುತ್ತಾರೆ.

‘ನಗರ ವ್ಯಾಪ್ತಿಯಲ್ಲಿ 35 ವಾರ್ಡ್‌ಗ ಳಿದ್ದು, ಸುಖಾಸುಮ್ಮನೆ ಕಸ ಸುರಿಯುತ್ತಿ ರುವ ಒಟ್ಟು 120 ಸ್ಥಳಗಳನ್ನು ಗುರುತಿಸಿ ನಗರಸಭೆ ವತಿಯಿಂದಲೇ ಜಾಗೃತಿ ಮತ್ತು ಎಚ್ಚರಿಕೆ ಫಲಕಗಳನ್ನು ಹಾಕಿಸಿದ್ದೇವೆ. ಸಿಬ್ಬಂದಿಯಿಂದಲೂ ಕಸ ತಂದು ಸುರಿ ಯುತ್ತಿರುವವರಿಗೆ ಮನವರಿಕೆ ಮಾಡಿಕೊ ಡುವ ಕೆಲಸ ಮಾಡುತ್ತಿದ್ದೇವೆ, ಇದರ ಫಲವಾಗಿಯೇ ಇಲ್ಲಿವರೆಗೆ 70 ರಿಂದ 75 ಕಸ ಸುರಿಯುತ್ತಿದ್ದ ಸ್ಥಳಗಳನ್ನ ನಿಯಂತ್ರಣಕ್ಕೆ ತರುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿದ್ದೇವೆ. ಇನ್ನುಳಿದ 50 ಸ್ಥಳಗ ಳಲ್ಲಿಯೂ ಇದೇ ರೀತಿ ಕೆಲಸ ಮಾಡಿ ಶೂನ್ಯಕ್ಕೆ ತರುವ ಕೆಲಸ ಮಾಡುತ್ತೇವೆ’ ಎಂದು ನಗರಸಭೆ ಆಯುಕ್ತ ಆರ್‌.ಮಂಜುನಾಥ್‌ ವಿಶ್ವಾಸ ವ್ಯಕ್ತಪಡಿಸಿದರು.

‘ಸ್ವಚ್ಛತೆ ಕಾಪಾಡಿ’
ಅನಧಿಕೃತವಾಗಿ ಎಲ್ಲೆಂದರಲ್ಲಿ ಕಸ ಸುರಿಯುವುದನ್ನು ಮಾಮೂಲಿ ಮಾಡಿಕೊಂಡಿರುವರನ್ನು ಗುರುತಿಸಿ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ, ಮಿತಿ ಮೀರಿದರೆ ದಂಡ ವಸೂಲಿ ಮಾಡಲು ಹಿಂಜರಿಯುವುದಿಲ್ಲ, ಇನ್ನಾದರೂ ತಮ್ಮ ಏರಿಯಾಗಳನ್ನು ಸ್ವಚ್ಚವಾಗಿಟ್ಟುಕೊಳ್ಳಿ, ತಮ್ಮ ಮನೆಬಾಗಿಲಿಗೆ ಬರುವ ಕಸ ವಿಲೇವಾರಿ ವಾಹನಗಳಿಗೆ ಹಸಿ ಮತ್ತು ಒಣ ಕಸ ವಿಂಗಡಿಸಿ ನೀಡುವುದನ್ನೇ ಕಾಯಕ ಮಾಡಿಕೊಳ್ಳಲು ಮನವಿ. ಆರ್‌.ಮಂಜುನಾಥ್‌, ಆಯುಕ್ತ, ನಗರಸಭೆ, ಮಂಡ್ಯ
ನಗರದಲ್ಲೆಡೆ ಬೇಕಾಬಿಟ್ಟಿ ಕಸ ಬಿಸಾಕು ವುದನ್ನು ನಿಲ್ಲಿಸಿ, ಕಸ ವಿಲೇವಾರಿ ವಾಹನಕ್ಕೆ ನೀಡಬೇಕು. ಇದರಿಂದ ಪೌರ ಕಾರ್ಮಿಕರಿಗೆ ಕಿರಿಕಿರಿ ತಪ್ಪಿಸಿದಂತಾಗುತ್ತದೆ
–ಹರೀಶ್, ದೊಡ್ಡಬಾಣಸವಾಡಿ ನಿವಾಸಿ, ಕೆಎಚ್‌ಬಿ ಬಡಾವಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT