ನಗರದ ರೈಲ್ವೆ ಕಲ್ಯಾಣಮಂಟಪದಲ್ಲಿ ಬುಧವಾರ ಏರ್ಪಡಿಸಿದ್ದ 62ನೇ ರೈಲ್ವೆ ಸಪ್ತಾಹ ಉದ್ಘಾಟಿಸಿ ಮಾತನಾಡಿದ ಅವರು, ಕಳೆದ ಸಾಲಿನಲ್ಲಿ ₹ 608.79 ಕೋಟಿ ಆದಾಯ ಸಂಗ್ರಹವಾಗಿತ್ತು. ಈ ಬಾರಿ 4,81,50,000 ಕ್ವಿಂಟಲ್ ಸರಕು ಸಾಗಣೆ ಮಾಡಲಾಗಿತ್ತು. ಕಳೆದ ವರ್ಷ 5,03,80,000 ಕ್ವಿಂಟಲ್ ಸಾಗಣೆಯಾಗಿತ್ತು. ಸರಕು ಸಾಗಣೆಯಲ್ಲಿ ಕೊಂಚ ಇಳಿಕೆಯಾಗಿದೆ. ರೈಲು ಸಂಚಾರದಲ್ಲಿ ಶೇ 97.58ರಷ್ಟು ಸಮಯಪಾಲನೆಯಾಗಿದೆ ಎಂದರು.