ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಬ್ಬರ ವಿರುದ್ಧ ಎಫ್‌ಐಆರ್‌

ಬಿಜೆಪಿ ಸೇರಲು ಹಣದ ಆಮಿಷ: ಆರೋಪ
Last Updated 27 ಜೂನ್ 2021, 2:55 IST
ಅಕ್ಷರ ಗಾತ್ರ

ಅರಸೀಕೆರೆ:ಸ್ಥಳೀಯ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರನ್ನು ಸೆಳೆಯಲು ಹಣದ ಆಮಿಷವೊಡ್ಡಿ ಆಪರೇಷನ್ ಕಮಲ ನಡೆಸಲಾಗಿದೆ ಎಂಬ ಆರೋಪ ಸಂಬಂಧ ಇಬ್ಬರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ನಗರಸಭೆ 2ನೇ ವಾರ್ಡ್‌ಜೆಡಿಎಸ್ ಸದಸ್ಯೆ ಕಲೈ ಅರಸಿ ಅವರು ನೀಡಿರುವ ದೂರು ಆಧರಿಸಿ, 28 ನೇ ವಾರ್ಡ್ ಸದಸ್ಯೆ ಆಯೇಷಾ ಪತಿಸಿಕಂದರ್ ಹಾಗೂ ನಗರಸಭೆ ಸದಸ್ಯ ಹರ್ಷವರ್ಧನ್ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಹಣದ ಆಮಿಷ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆಪ್ರಕರಣ ದಾಖಲಿಸಲಾಗಿದೆ.

‘ಬಿಜೆಪಿಗೆ ಬರುವಂತೆ ತಮಗೆ ಬಲವಂತವಾಗಿ ಸಿಕಂದರ್‌, ಹರ್ಷವರ್ಧನ್‌ ಹಣ ನೀಡಿದ್ದಲ್ಲದೆ ಬೆದರಿಕೆ ಸಹ ಹಾಕಿ ಜಾತಿ ನಿಂದನೆ ಮಾಡಿದರು. ಸಿ.ಎಂ ರಾಜಕೀಯ ಕಾರ್ಯದರ್ಶಿ ಎನ್‌.ಆರ್‌. ಸಂತೋಷ್ ಅವರೂ ಕರೆ ಮಾಡಿ, ಹಣದ ಆಮಿಷ ಒಡ್ಡಿ ಬಿಜೆಪಿಗೆ ಬರುವಂತೆ ಆಹ್ವಾನಿಸಿದರು’ ಎಂದು ಎಂದು ಕಲೈ ಅರಸಿ ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ, ಕಲೈ ಅರಸಿ ಮನೆಗೆ ಸಿ.ಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ನೇರವಾಗಿ ಹೋಗದ ಹಿನ್ನೆಲೆಯಲ್ಲಿ ಅವರ ವಿರುದ್ಧ ಯಾವುದೇ ಕೇಸ್ ದಾಖಲಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT