ಭಾನುವಾರ, ಅಕ್ಟೋಬರ್ 2, 2022
19 °C

ಮೈಸೂರು: ಪಕ್ಷಿ ವೀಕ್ಷಣೆ, ಪರಿಸರ ಸಂರಕ್ಷಣೆ ಜಾಗೃತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಸರ್ಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ಪಕ್ಷಿ ವೀಕ್ಷಣೆ ಕುರಿತು ಅರಿವು ಕಾರ್ಯಕ್ರಮ ನಡೆಯಿತು.

ವನ್ಯಜೀವಿ ಸಂರಕ್ಷಣಾ ಪ್ರತಿಷ್ಠಾನದಿಂದ ಎರಡು ದಿನಗಳವರೆಗೆ ಕಾರಂಜಿ ಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದರ್ಶ ಶಾಲೆಯ 80 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತಿಷ್ಠಾನದ ಡಿ.ರಾಜಕುಮಾರ್‌, ಅನಿಲ್‌ಕುಮಾರ್‌, ಪ್ರದೀಪ್‌ ಮತ್ತು ಮಾರ್ಕ್‌ ಸ್ಟೀವ್‌ ಜಾಗೃತಿ ಮೂಡಿಸಿದರು. ಕೆರೆ, ಜೌಗು ಪ್ರದೇಶದಲ್ಲಿ ಬದುಕುವ ಪಕ್ಷಿಗಳು ಹಾಗೂ ವಲಸೆ ಪಕ್ಷಿಗಳು, ಪಕ್ಷಿಗಳ ಆಹಾರ, ಸಂತಾನೋತ್ಪತ್ತಿ, ಅವುಗಳ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. ಪಕ್ಷಿಗಳ ಶಬ್ದ, ಹೆಸರು ತಿಳಿಸಿಕೊಟ್ಟರು.

ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯಶಿಕ್ಷಕ ಸತೀಶ್‌, ಶಿಕ್ಷಕಿಯರಾದ ದಿವ್ಯ, ಪ್ರಭಾ ಎಂ.ಜಿ., ಲಕ್ಷ್ಮಿ ಆರ್‌., ನಿಶಾಂತ್‌ ಅಂಜುಮ್‌, ಸಾವಿತ್ರಿ ಎಸ್‌. ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.