ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತ ನಿರ್ವಹಣೆಗೆ ಘಟಕ ಸ್ಥಾಪನೆ

Published 28 ನವೆಂಬರ್ 2023, 16:36 IST
Last Updated 28 ನವೆಂಬರ್ 2023, 16:36 IST
ಅಕ್ಷರ ಗಾತ್ರ

ಮೈಸೂರು: ನಗರದ ನಾರಾಯಣ ಆಸ್ಪತ್ರೆಯಲ್ಲಿ ಹಠಾತ್ ಹೃದಯಾಘಾತ ನಿರ್ವಹಣೆಗೆ ವಿಶೇಷ ಘಟಕ ಸ್ಥಾಪನೆ ಮಾಡಲಾಗಿದೆ.

ಈ ಘಟಕವು ಯುವ ವಯಸ್ಕರಲ್ಲಿ ಹಠಾತ್ ಹೃದಯ ಸಾವಿನ ನಿರ್ಣಾಯಕ ಸಮಸ್ಯೆಯನ್ನು ಪರಿಹರಿಸುವ ಗುರಿ ಹೊಂದಿದ್ದು, ಆಸ್ಪತ್ರೆಯ ಕ್ಲಿನಿಕಲ್ ನಿರ್ದೇಶಕ ಮತ್ತು ಹೃದಯ ಶಸ್ತ್ರಚಿಕಿತ್ಸೆಯ ಹಿರಿಯ ಸಲಹೆಗಾರ ಡಾ.ಎಂ.ಎನ್.ರವಿ ನೇತೃತ್ವದಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಹಠಾತ್ ಹೃದಯದ ಸಾವು ಇದು ಹೃದಯ ಸಂಬಂಧಿ ಸಮಸ್ಯೆಗಳಿಂದ ಉಂಟಾಗಲಿದೆ. ರೋಗ ಲಕ್ಷಣ ಕಾಣಿಸಿಕೊಂಡ ಒಂದು ಗಂಟೆಯೊಳಗೆ ಸಾವು ಸಂಭವಿಸುತ್ತದೆ. ಸರಾಸರಿ 200 ಯುವಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಂಡುಬರುತ್ತದೆ. ಹೃದಯಾಘಾತಕ್ಕೂ ಮುನ್ನ ಉಸಿರಾಟ, ಎದೆನೋವು, ತಲೆ ತಿರುಗುವಿಕೆ, ಆಯಾಸ ಕಾಡುತ್ತದೆ. ನಿಯಮಿತ ಹೃದಯ ತಪಾಸಣೆಯಿಂದ ತಡೆಗಟ್ಟಬಹುದು. ಸಮಸ್ಯೆ ತೀವ್ರವಾಗಿದ್ದರೆ ಶಸ್ತ್ರಚಿಕಿತ್ಸೆ ಬೇಕಾಗಬಹುದು.

ಇಂತಹ ಪ್ರಕರಣಗಳ ತ್ವರಿತ ಮತ್ತು ಪರಿಣಾಮಕಾರಿ ನಿರ್ವಹಣೆಯ ಅಗತ್ಯ ಮನಗಂಡು ನಾರಾಯಣ ಆಸ್ಪತ್ರೆಯು ವಿಶೇಷ ಘಟಕ ಸ್ಥಾಪಿಸುವ ಮೂಲಕ ದಿಟ್ವ ಹೆಜ್ಜೆ ಹಾಕಿದೆ. 18 ತಿಂಗಳ ಅವಧಿಯಲ್ಲಿ ಈ ಘಟಕವು ಹಲವಾರು ವ್ಯಕ್ತಿಗಳ ವೈದ್ಯಕೀಯ ತಪಾಸಣೆ ನಡೆಸಿದೆ. ಮಧ್ಯಮ ಕಾಯಿಲೆ ಲಕ್ಷಣ ಹೊಂದಿರುವ ಹೆಚ್ಚಿನ ರೋಗಿಗಳು ಪ್ರಯೋಜನ ಪಡೆದಿದ್ದು, ಘಟಕದ ವೈದ್ಯಕೀಯ ಕಾರ್ಯಗಳ ಫಲಿತಾಂಶ ಪರಿಣಾಮಕಾರಿಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT