ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಸು, ಶಿವಕುಮಾರ ಶ್ರೀಗೆ ಭಾರತರತ್ನ: ಎಚ್‌. ವಿಶ್ವನಾಥ್‌ ಒತ್ತಾಯ

Published 23 ಫೆಬ್ರುವರಿ 2024, 8:08 IST
Last Updated 23 ಫೆಬ್ರುವರಿ 2024, 8:08 IST
ಅಕ್ಷರ ಗಾತ್ರ

ಮೈಸೂರು: ‘ಸಾಮಾಜಿಕ ನ್ಯಾಯದ ಹರಿಕಾರರಾದ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಮತ್ತು ಧಾರ್ಮಿಕ ನಾಯಕ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ (ಮರಣೋತ್ತರ) ಪ್ರಶಸ್ತಿ ನೀಡಬೇಕು’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌. ವಿಶ್ವನಾಥ್‌ ಒತ್ತಾಯಿಸಿದರು.

‘ಈ ಬಗ್ಗೆ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ರಾಜ್ಯದ ಶಾಸಕರು ಮತ್ತು ಸಂಸದರು ದನಿಗೂಡಿಸಬೇಕು’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಆಗ್ರಹಿಸಿದರು.

‘ಐತಿಹಾಸಿಕ ಭೂ ಸುಧಾರಣೆ ಕಾಯ್ದೆ ಮೂಲಕ ಉಳ್ಳವರಿಂದ ಇಲ್ಲದವರಿಗೆ ಭೂಮಿ‌ ಕೊಡಿಸಿದ ಅಭಿವೃದ್ಧಿಯ ಹರಿಕಾರ ಅರಸು. ಯಾವುದೇ ರಕ್ತಪಾತವಿಲ್ಲದೇ 21 ಲಕ್ಷ ಎಕರೆ ಭೂಮಿ‌ಯನ್ನು ಉಳುವವರಿಗೇ ಕೊಟ್ಟು ಶಾಶ್ವತವಾಗಿ ಅನ್ನ ನೀಡಿದವರು. ಹಲವಾರು ಹಾಸ್ಟೆಲ್‌ಗಳನ್ನು ಸ್ಥಾಪಿಸಿ ಮಕ್ಕಳಿಗೆ ಶಾಶ್ವತವಾಗಿ ಅಕ್ಷರ ಕೊಟ್ಟವರು. ಹಾವನೂರು ವರದಿ ಮೂಲಕ ಒಕ್ಕಲಿಗ ಮತ್ತು ವೀರಶೈವ ಲಿಂಗಾಯತ ಸಮಾಜದವರು ಸೇರಿದಂತೆ ಎಲ್ಲ ವರ್ಗದವರಿಗೂ ಮೀಸಲಾತಿ ಕೊಟ್ಟವರು’ ಎಂದು ಸ್ಮರಿಸಿದರು.

‘ಯದುವಂಶದ ಅರಸರಿಗೂ ಭಾರತರತ್ನ ಕೊಡಬೇಕಾಗಿತ್ತು’ ಎಂದರು.

‘ಸಹಕಾರ ವಲಯದಲ್ಲೂ ಮೀಸಲಾತಿ ಜಾರಿಗೆ ಬರಬೇಕು. ಆದರೆ, ಅದಕ್ಕೆ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರು ವಿಧಾನಮಂಡಲ ಅಧಿವೇಶನದಲ್ಲಿ ಪ್ರಬಲವಾಗಿ ವಿರೋಧ ವ್ಯಕ್ತಪಡಿಸಿರುವುದು ಖಂಡನೀಯ. ಬೇರೆ ಸಮಾಜದವರ ಋಣ ಅವರ ಮೇಲಿಲ್ಲವೇ? ಆ ಕ್ಷೇತ್ರದ ಮೇಲಿನ ಹಿಡಿತ ತಪ್ಪಿ ಹೋಗುತ್ತದೆ ಎಂಬ ಭಯವೇ?’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT