ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಲ್ಲೇಶ್ವರ ದೇವರ ಉಚ್ಚಾಯ ಸಂಭ್ರಮ 

Published 10 ಮಾರ್ಚ್ 2024, 15:45 IST
Last Updated 10 ಮಾರ್ಚ್ 2024, 15:45 IST
ಅಕ್ಷರ ಗಾತ್ರ

ತುರ್ವಿಹಾಳ: ಹಿರೇಬೇರ್ಗಿ ಗ್ರಾಮದಲ್ಲಿ ಐತಿಹಾಸಿಕ ಕಲ್ಯಾಣ ಚಾಲುಕ್ಯರ ಕಾಲದ ಇತಿಹಾಸ ಹೊಂದಿರುವ ಕಲ್ಲೇಶ್ವರ ದೇವರ ಜಾತ್ರೆಯ ಉಚ್ಚಾಯವನ್ನು ಜನರು ಸಂಭ್ರಮದಿಂದ ಶನಿವಾರ ಸಂಜೆ ಎಳೆದರು.

ಬೃಹತ್ ಕಲ್ಲಿನ ಶಿಲೆಗಳಿಂದ ನಿರ್ಮಾಣವಾದ ದೇವಾಲಯದಲ್ಲಿ ಶಿವನಮೂರ್ತಿ ಪ್ರತಿಷ್ಠಾಪಿಸಲಾಗಿದೆ, ಗತಕಾಲದಿಂದ ಪ್ರತಿವರ್ಷ ಶಿವರಾತ್ರಿಗೆ ಜಾತ್ರೆ ನಡೆಯುವ ಸಂಪ್ರದಾಯ ಮುಂದುವರೆದಿದೆ.

ದೇವಸ್ಥಾನದ ಇತಿಹಾಸ ಸಾರುವ ಶಿಲಾಶಾಸನ ದೇವಾಲಯದ ಆವರಣದಲ್ಲಿದೆ, ಇದು ಕಲ್ಯಾಣ ಕಾಲುಕ್ಯರ ಪ್ರಸಿದ್ದ ಅರಸ 6ನೇ ವಿಕ್ರಮಾದಿತ್ಯನ ಕಾಲದಲ್ಲಿ ಮೂಡಿಬಂದಿದೆ. ಶನಿವಾರ ಬೆಳಿಗ್ಗೆ ದೇವಸ್ಥಾನಕ್ಕೆ ಬಾಳೆಗೊನಿ, ಮಾವಿನಎಲೆ, ತೆಂಗಿನಗರಿ, ಹೂವುಗಳಿಂದ ಅಲಂಕಾರ ಮಾಡಲಾಯಿತು, ನಂತರ ಶಿವನ ಮೂರ್ತಿಗೆ ವಿಶೇಷ ಪೂಜೆ ನಡೆಯಿತು, ಭಕ್ತರು ದೇವರಿಗೆ ನೈವೇಧ್ಯ ಅರ್ಪಿಸಿದರು.
ಸಾಯಂಕಾಲ ಕಲ್ಲೇಶ್ವರ ದೇವರ ದೇವಸ್ಥಾನದಿಂದ ಪಾದಗಟ್ಟೆಯವರೆಗೆ ಉಚ್ಚಾಯವನ್ನು ಭಕ್ತರು ಸಂಭ್ರಮದಿಂದ ಎಳೆದರು. ಈ ಸಂದರ್ಭದಲ್ಲಿ ನೂರಾರು ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT