ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ವಿವಿಧೆಡೆ ಧ್ವಜಾರೋಹಣ

Last Updated 2 ನವೆಂಬರ್ 2021, 5:04 IST
ಅಕ್ಷರ ಗಾತ್ರ

ರಾಯಚೂರು: ನಗರದ ವಿವಿಧೆಡೆ ಸೋಮವಾರ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಲಾಯಿತು.

ಕರ್ನಾಟಕ ಜನಸೈನ್ಯ: ಜಿಲ್ಲಾ ಘಟಕದ ವತಿಯಿಂದ ನಗರದ ಅಶೋಕ ಡಿಪೋ ಹತ್ತಿರ ಧ್ವಜಾರೋಹಣ ಮಾಡಲಾಯಿತು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ ಅರಕಲಗೋಲ್, ಅಶೋಕ ಕುಮಾರ ಜೈನ, ನಿಶಾಂತ್ ಕುಮಾರ, ವೆಂಕಟೇಶ, ಪ್ರಸಾದ್, ಸಂದೀಪ, ರಾಜಾ, ಹುಸೇನಿ, ಉಮೇಶ, ಬಸವರಾಜ ಇದ್ದರು.

ಸುಖಾಣಿ ಕಾಲೊನಿ: ನಗರದ ಸಿಯತಲಾಬ್ ವ್ಯಾಪ್ತಿಯ ಸುಖಾಣಿ ಕಾಲೋನಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾ ಘಟಕದ ವತಿಯಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಖಲೀಲ್ ಪಾಶ ಧ್ವಜಾರೋಹಣ ನೆರವೇರಿಸಿದರು. ಆನಂತರ ಸ್ಥಳೀಯರಿಗೆ ಸಿಹಿ ಹಂಚಿ ಶುಭ ಕೋರಲಾಯಿತು. ಈ ವೇಳೆ ರಾಚಯ್ಯ ಸ್ವಾಮಿ, ಖಾಸಿಂಸಾಬ್, ಬಂದೆನವಾಜ್, ಸೈಯದ್ ಫಾರೂಕ್ ಇದ್ದರು.

ಫೆಡರಲ್ ಕಾಲೇಜ್: ನಗರದ ಹೊರವಲಯದ ಯರಮರಸ್ ಕ್ಯಾಂಪ್ ಬಳಿಯ ಫೆಡರಲ್ ಕಾಲೇಜಿನಲ್ಲಿ ರಾಜ್ಯೋತ್ಸವದ ಅಂಗವಾಗಿ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಹೈಫೇರೋಜ್ ಧ್ವಜಾರೋಹಣ ಮಾಡಿದರು.

ಸಂಸ್ಥೆಯ ಡಿ.ಇಡಿ ಕಾಲೇಜಿನ ಪ್ರಾಚಾರ್ಯ ಸತ್ಯನಾರಾಯಣ, ಪಿಯುಸಿಯ ಪ್ರಾಚಾರ್ಯ ಇಸಾಕ್, ಮುಖ್ಯಗುರು ಸಮೀನಾ ಬಾನು, ಜುಲ್ಫೀನ್ ಶ್ರೀನಿವಾಸ, ಸಿಬ್ಬಂದಿ ಇದ್ದರು.

ರಿಮ್ಸ್‌ನಲ್ಲಿ ಆಟೊ ಚಾಲಕರಿಂದ ಧ್ವಜಾರೋಹಣ: ನಗರದ ರಿಮ್ಸ್ ಆಸ್ಪತ್ರೆಯ ಆಟೋ ನಿಲ್ದಾಣದ ಬಳಿ ಆಟೊ ಚಾಲಕರ ಸಂಘದಿಂದ ರಾಜ್ಯೋತ್ಸವ ಆಚರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ನರಸಿಂಹಲು ಮೈತ್ರಿಕರ್ ಧ್ವಜಾರೋಹಣ ಮಾಡಿದರು. ನಾಗರಾಜ, ಫಾರೂಕ್, ರಮೇಶ ರಾಮ್, ಖಾದರ್, ಸಿಕಂದರ್, ಚಂದಾವಲಿ ಹಾಗೂ ಮಹೆಬೂಬ್ ಇದ್ದರು.

ಸರ್ಕಾರಿ ನೌಕರರ ಸಂಘ: ನಗರದ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿ ಸೋಮವಾರ ರಾಜ್ಯೊತ್ಸವದ ನಿಮಿತ್ತ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ, ಉಪಾಧ್ಯಕ್ಷ ಸಂತೋಷ, ಮೋಹಿನುಲ್ ಹಕ್, ಸುರೇಶ ದಂಡಪ್ಪ ಬಿರಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT