ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶರಣರ ವಚನದಲ್ಲಿ ಸಂವಿಧಾನದ ಆಶಯಗಳಿವೆ’

Published 1 ಫೆಬ್ರುವರಿ 2024, 15:19 IST
Last Updated 1 ಫೆಬ್ರುವರಿ 2024, 15:19 IST
ಅಕ್ಷರ ಗಾತ್ರ

ದೇವದುರ್ಗ: 12 ನೇ ಶತಮಾನದ ಶರಣರು ರಚಿಸಿದ ವಚನ ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳು ಒಳಗೊಂಡಿವೆ ಎಂದು ತಹಶೀಲ್ದಾರ ಚನ್ನಮಲ್ಲಪ್ಪ ಘಂಟಿ ಹೇಳಿದರು.

ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಮಡಿವಾಳ ಮಾಚಿದೇವ ಜಯಂತಿಯಲ್ಲಿ ಮಾತನಾಡಿದ ಅವರು, ಮಾಚಿದೇವರ ವಚನದಲ್ಲಿ ಸಮಾಜದ ಡೊಂಕು ತಿದ್ದುವ ಅಂಶಗಳು ಒಳಗೊಂಡಿವೆ. ಸಮಾನತೆ ಜಾತಿ ವ್ಯವಸ್ಥೆ ಸೇರಿದಂತೆ ಅವರ ವಚನದ ಅಂಶಗಳು ಸಮಾಜಕ್ಕೆ ಇಂದಿಗೂ ದಾರಿದೀಪವಾಗಿವೆ ಎಂದರು.

ಗ್ರೇಡ್–2 ತಹಶೀಲ್ದಾರ್‌ ವೆಂಕಟೇಶ, ಭೀಮರಾಯ ಮೇಟಿ, ಗೋವಿಂದ ನಾಯಕ, ಅನಿಲಕುಮಾರ, ಬಸವರಾಜ ಪೂಜಾರಿ, ಪ್ರವೀಣ ಕುಮಾರ, ಶರಣಯ್ಯ ಸ್ವಾಮಿ,ಕಸಾಪ ಅಧ್ಯಕ್ಷ ಎಚ್ ಶಿವರಾಜ, ಮಡಿವಾಳ ಸಮಾಜದ ತಾಲ್ಲೂಕು ಘಟಕ ಅಧ್ಯಕ್ಷ ಬಸವರಾಜ, ಭೀಮಣ್ಣ, ಶಿವರಾಜ ಪೂಜಾರಿ, ಕರವೇ ಅಧ್ಯಕ್ಷ ಟಿ ಜಯರಾಜ, ಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT