ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿನಾಡ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ

Last Updated 26 ಜನವರಿ 2020, 14:18 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ಗಡಿಗೆ ಹೊಂದಿಕೊಂಡ ತೆಲಂಗಾಣ ರಾಜ್ಯದ ಕೃಷ್ಣಾದಲ್ಲಿರುವ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ನಾರಾಯಣಪೇಟ್‌ ಜಿಲ್ಲಾ ಪಂಚಾಯಿತಿ ಕೃಷ್ಣಾ ಕ್ಷೇತ್ರದ ಸದಸ್ಯೆ ಆಂಜಿನಮ್ಮ ಪಾಟೀಲ, ಕೃಷ್ಣಾ ಗ್ರಾಮದ ಸರಪಂಚ್‌ರಾಧಾ ಮಹಾದೇವ, ಕೃಷ್ಣಾ ಮಂಡಲ್‌ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ವೆಂಕಟರೆಡ್ಡಿ ಪಾಟೀಲ,ಎಸ್‌ಎಂಸಿ ಚೇರಮನ್‌ ರಾಜು ಹಾಗೂಶಿವರಾಜ ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ನಿಜಾಮುದ್ದೀನ್‌ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.ಕನ್ನಡ ದೇಶಭಕ್ತಿ ಗೀತೆಗಳಿಗೆ ಶಾಲಾ ಮಕ್ಕಳು ನೃತ್ಯ ಪ್ರದರ್ಶಿಸಿದರು.

ಶಾಲಾ ಮಕ್ಕಳಿಂದ ಆಯೋಜಿಸಿದ್ದ ಪಾಠೋಪಕರಣಗಳ ಪ್ರದರ್ಶನವನ್ನು ಕೃಷ್ಣಾ ಗ್ರಾಮದ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಶಿಕ್ಷಕರಾದ ರೇಣುಕಾದೇವಿ, ಟಿ.ರೇಣುಕಾ, ಮಹೇಶ, ಮಲ್ಲೇಶ, ವೆಂಕಟರೆಡ್ಡಿ, ಸಿ.ನಾಗರಾಜ, ಜಿ.ನಾಗರಾಜ, ಶಾಹೀನ್‌, ಭಾಗ್ಯಲಕ್ಷ್ಮೀ, ರಂಗಾರಾವ್‌, ಪಲ್ಲವಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸಾಮಾಜಿಕ ಕಾರ್ಯಕರ್ತ ಗೋವಿಂದ ಅವರು ತಂದೆಯ ಸ್ಮರಣಾರ್ಥ 250 ಕನ್ನಡ–ಇಂಗ್ಲಿಷ್‌ ನಿಘಂಟುಗಳನ್ನು ಶಾಲೆಗೆ ಉಚಿತವಾಗಿ ನೀಡಿದರು.

ಎಲ್‌ಐಸಿ ಪ್ರತಿನಿಧಿ ರಾಘವೇಂದ್ರರಾವ್‌ ಕುಲಕರ್ಣಿ ಒಂದು ಹಾಗೂ ಶಾಲೆಯ ಹಳೇ ವಿದ್ಯಾರ್ಥಿ ಗಾ.ರಾ. ಜಯಪ್ರಕಾಶ್‌ ಅವರು ಎರಡು ಫ್ಯಾನ್‌ಗಳನ್ನು ಉಚಿತವಾಗಿ ನೀಡಿದರು. ಕೆ.ಅರವಿಂದಕುಮಾರ್‌, ವೆಂಕಟೇಶ ಅವರು ತಂದೆಯ ಸ್ಮರಣಾರ್ಥ ಉಚಿತವಾಗಿ ಕೂಲರ್‌ ನೀಡಿದರು. ಜಿ.ರವಿಕುಮಾರ್‌ ಅವರು ಗ್ರಂಥಾಲಯಕ್ಕೆ ರ‍್ಯಾಕ್‌ಗಳನ್ನು ದೇಣಿಗೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT