ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗಸುಗೂರು | ರಸ್ತೆ ಮೇಲೆ ಹರಿಯುವ ಕೊಳಚೆ ನೀರು

Published 15 ಮೇ 2024, 14:11 IST
Last Updated 15 ಮೇ 2024, 14:11 IST
ಅಕ್ಷರ ಗಾತ್ರ

ಲಿಂಗಸುಗೂರು: ತಾಲ್ಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ವೈಜ್ಞಾನಿಕವಾಗಿ ರಸ್ತೆ ಹಾಗೂ ಚರಂಡಿ ನಿರ್ಮಿಸದ ಕಾರಣ ಕೊಳಚೆ ನೀರು ರಸ್ತೆಗುಂಟ ಹರಿದು ಅಲ್ಲಲ್ಲಿ ಸಂಗ್ರಹವಾಗಿ ಕೊಳಚೆ ಪ್ರದೇಶವಾಗಿ ಮಾರ್ಪಟ್ಟಿದೆ.

ಹಲವು ವರ್ಷಗಳಿಂದ ಗ್ರಾಮಸ್ಥರು ಘನತ್ಯಾಜ್ಯ ವಿಲೇವಾರಿ, ವಾರ್ಡ್‍ಗಳಲ್ಲಿನ ಕೊಳಚೆ ನಿರ್ಮೂಲನೆಗೆ ಮನವಿ ಸಲ್ಲಿಸುತ್ತ ಬಂದಿದ್ದರೂ ನ್ಯಾಯ ದೊರೆತಿಲ್ಲ. ಪ್ರಮುಖರು, ಸದಸ್ಯರು, ಅಧಿಕಾರಿಗಳು ವಿವಿಧ ಯೋಜನೆಗಳಡಿ ಕಾಗದದಲ್ಲಿ ಅಭಿವೃದ್ಧಿ ತೋರಿಸಿ ಹಣ ದುರ್ಬಳಕೆ ಮಾಡಿಕೊಂಡಿರುವುದು ಸಾಧನೆಯಾಗಿದೆ. ಕಾರಣ ಜಿಲ್ಲಾಧಿಕಾರಿ ಹೊನ್ನಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿಗತಿ ಅಧ್ಯಯನ ಮಾಡಿ ಸ್ವಚ್ಛ ಗ್ರಾಮ ಯೋಜನೆಯಡಿ ಸುಂದರ ಗ್ರಾಮವನ್ನಾಗಿಸಬೇಕು. ಕೊಳಚೆ ನಿರ್ಮೂಲನೆಗೊಳಿಸಿ ಜನರಿಗೆ ಆರೋಗ್ಯಯುತ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು.

ಅಮರಗುಂಡ, ಅಮರೇಶ, ಬಸವರಾಜ, ಸೂಗೂರೇಶ, ಮಲ್ಲೇಶ, ಹುಲಗಪ್ಪ, ರಾಮಣ್ಣ ಹೊನ್ನಳ್ಳಿ ಗ್ರಾಮಸ್ಥರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT