ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನಕಪುರ: ಗಂಧದ ಮರ ಕಳವು ಆರೋಪಿ ಬಂಧನ

Published 30 ಮೇ 2024, 16:04 IST
Last Updated 30 ಮೇ 2024, 16:04 IST
ಅಕ್ಷರ ಗಾತ್ರ

ಕನಕಪುರ: ರೈತನಿಂದ ನೀಲಗಿರಿ ಮರ ಖರೀದಿ ಮಾಡಿದ್ದ ಮರದ ವ್ಯಾಪಾರಿ, ನೀಲಗಿರಿ ಮರದ ಜತೆಗೆ ಶ್ರೀಗಂಧದ ಮರ ಕತ್ತರಿಸಿ ಕಳವು ಮಾಡಿ ವಂಚಿಸಿರುವ ಘಟನೆ ಯರೇಹಳ್ಳಿ ನಡೆದಿದೆ. ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿ ರಾಮನಗರ ತಾಲ್ಲೂಕಿನ ಬಿಡದಿ ಹೋಬಳಿ ಮೂಡ್ಲಯ್ಯನದೊಡ್ಡಿ ನಾಗರಾಜ(43).

ಆರೋಪಿ ನೀಲಗಿರಿ ಮರದ ಜತೆಗೆ ಪಕ್ಕದಲ್ಲೇ ಇದ್ದ ಶ್ರೀಗಂಧದ ಮರ ಕತ್ತರಿಸಿದ್ದಾರೆ. ಈ ಸಂಬಂಧ ಶ್ರೀಗಂಧ ಮರದ ಮಾಲೀಕ ಮುನಿಯಪ್ಪ ಹಾರೋಹಳ್ಳಿ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಅರಣ್ಯ ಇಲಾಖೆ ಸಹಾಯಕ ಅರಣ್ಯಾಧಿಕಾರಿ ಗಣೇಶ್ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ದಾಳೇಶ್, ಉಪವಲಯ ಅರಣ್ಯ ಅಧಿಕಾರಿ ರಮೇಶ್‌ ಯಂಕಂಚಿ, ಬೀಟ್ ರಕ್ಷಕರಾದ ಲೋಕೇಶ್ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT