ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಮಾತು | ಸಮಗ್ರ ಕೃಷಿ ತಂದ ಲಾಭ

ಕಿರಣ್ ಕುಮಾರ್
Published 7 ಫೆಬ್ರುವರಿ 2024, 6:02 IST
Last Updated 7 ಫೆಬ್ರುವರಿ 2024, 6:02 IST
ಅಕ್ಷರ ಗಾತ್ರ

ಭದ್ರಾವತಿ : ತಾಲ್ಲೂಕಿನ ಅಂತರಗಂಗೆ ಗ್ರಾಮದ ಶಿವಲಿಂಗಯ್ಯ ತಮ್ಮ 4 ರಿಂದ 5 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅನುಸರಿಸಿ, ವಿಶೇಷವಾಗಿ ಹೂವಿನ ಬೆಳೆಗೆ ಹೆಚ್ಚು ಒತ್ತು ನೀಡಿ ಲಾಭಗಳಿಸಿ 2023ನೇ ವರ್ಷದ ಶ್ರೇಷ್ಠ ರೈತ ಎಂಬ ಬಿರುದು ಮತ್ತು ಆತ್ಮ ಪ್ರಶಸ್ತಿ ಪಡೆದಿದ್ದಾರೆ.

ಕಾಕಡ ಮಲ್ಲಿಗೆ, ಹೈಬ್ರೀಡ್ ಮಲ್ಲಿಗೆ (ಕೋಲ್ಕತ್ತಾ), ದುಂಡು ಮಲ್ಲಿಗೆ ಇವುಗಳನ್ನು ಪ್ರತಿ 10 ಗುಂಟೆಗಳಾಗಿ ವಿಂಗಡಿಸಿ ಬೆಳೆದಿದ್ದಾರೆ. ಮದುವೆ ಸಮಾರಂಭಗಳ ದಿನಗಳಲ್ಲಿ ಹಾರ ಮಾಡಲು ವಿಶೇಷ ಬೇಡಿಕೆ ಇರುತ್ತದೆ. ಮಾರುಕಟ್ಟೆಯಲ್ಲಿ ಮಲ್ಲಿಗೆ ಹೂಗಳಿಗೆ ಕೆ.ಜಿಗೆ ₹400ಕ್ಕೂ ಹೆಚ್ಚು ದರವಿದೆ. ಇದರಿಂದ ಹೆಚ್ಚು ಹಣ ಸಂಪಾದಿಸುತ್ತಿದ್ದಾರೆ.

ಹೈನುಗಾರಿಕೆ :

ಅಡಿಕೆ ತೋಟ, ಎರಡು ಎಕರೆ ತೆಂಗು ಉಪಕಸುಬುಗಳಾಗಿ ಬದಿಗಳಲ್ಲಿ ಬಾಳೆ ಬೆಳೆಯಲಾಗುತ್ತಿದೆ. ಇದರ ಜೊತೆಗೆ 20 ರಿಂದ 25 ಕುರಿ, ಆಡು, ಮೇಕೆ ಸಾಕಾಣಿಕೆ ಐದು ಹಸು, ಕೋಳಿಗಳು ಇವೆ. ಮೇವಿಗಾಗಿ ಪಕ್ಕದ ಐದು ಎಕರೆ ಭೂಮಿಯನ್ನು ಗುತ್ತಿಗೆ ಪಡೆದು ಸಂಪೂರ್ಣ ಭತ್ತ ಬೆಳೆಯಲಾಗುತ್ತದೆ. ಅದರ ಸಂಪೂರ್ಣ ಹುಲ್ಲನ್ನು ಜಾನುವಾರುಗಳಿಗೆ ಮೇವು ಆಗಿ ಬಳಸಲಾಗುತ್ತದೆ. ಗುತ್ತಿಗೆ ಪಡೆದ ಭೂಮಿಗೆ ಲಾಭವಿರಲಿ ನಷ್ಟವಿರಲಿ ನಿಗದಿತ ಹಣ ನೀಡಲಾಗುತ್ತಿದೆ.

ಜೀವಾಮೃತ ವಿಧಾನ :

ಬೆಳೆ ಔಷಧಿಗಾಗಿ ಜೀವಾಮೃತ ವಿಧಾನ ಅಳವಡಿಸಿಕೊಳ್ಳಲಾಗಿದೆ, ನಾಟಿ ಗೊಬ್ಬರಕ್ಕೆ ಅನುಕೂಲವಾಗಿದೆ. ಗೋಮೂತ್ರ ಮತ್ತು ಇತರೆ ಸಂಗ್ರಹವಾದ ಕೊಳೆತ ತರಕಾರಿ, ಗಿಡಗಂಟೆಗಳನ್ನು ಡ್ರಂಗಳಲ್ಲಿ ನಾಲ್ಕರಿಂದ ಐದು ದಿನಗಳ ಕಾಲ ಸಂರಕ್ಷಿಸಲ್ಪಟ್ಟು ನಂತರ ಅವುಗಳನ್ನು ಗೊಬ್ಬರವಾಗಿ ಪರಿವರ್ತಿಸಿ ಬೆಳೆಗಳಿಗೆ ಸಿಂಪಡಿಸಲಾಗುತ್ತಿದೆ.

ಆತ್ಮಪ್ರಶಸ್ತಿ :

ಬರಗಾಲದ ನಡುವೆಯೂ ಸಮಗ್ರ ಕೃಷಿ ಪದ್ಧತಿ ಅನುಸರಿಸಿ ಲಾಭ ಪಡೆಯಬಹುದು ಎಂದು ತೋರಿಸಿಕೊಟ್ಟ ರೈತ ಎಂದು ಈಚೆಗೆ ಕುವೆಂಪುರಂಗ ಮಂದಿರದಲ್ಲಿ ನಡೆದ ಸಿರಿಧಾನ್ಯ ಮೇಳ ಕಾರ್ಯಕ್ರಮದಲ್ಲಿ 2023 ನೇ ವರ್ಷದ ಸಮಗ್ರ ಶ್ರೇಷ್ಠ ರೈತ ಎಂಬ ಬಿರುದಿನೊಂದಿಗೆ ಆತ್ಮಪ್ರಶಸ್ತಿ ದೊರೆತಿದೆ.

ಶಿವಲಿಂಗಯ್ಯ ಅವರು ಐದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕಾಕಡ, ಮಲ್ಲಿಗೆ ಹೂವು ಬೆಳೆದು ಉತ್ತಮ ಲಾಭ ಪಡೆದಿದ್ದು ಇಲಾಖೆಯಿಂದ ಪ್ರಶಸ್ತಿಗೆ ಹೆಸರು ದಾಖಲಿಸಿಕೊಳ್ಳಲಾಯಿತು ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಯು.ಎಚ್.ರವಿಕುಮಾರ್ ಹೇಳಿದರು.

’ಇಲಾಖೆಯಿಂದ ರೈತರಿಗೆ ಅನೇಕ ರೀತಿಯ ಮಾರ್ಗದರ್ಶನಗಳು, ಉಚಿತ ಕಾರ್ಯಾಗಾರ ಮತ್ತು ಸಬ್ಸಿಡಿ ರೀತಿಯಲ್ಲಿ ಸಾಲ ಸೌಲಭ್ಯಗಳಿವೆ. ರೈತರು ಅದನ್ನು ಸದುಪಯೋಗ ಪಡೆದುಕೊಳ್ಳಬೇಕು. ಶಿವಲಿಂಗಯ್ಯ ಅವರ ಸಮಗ್ರ ಕೃಷಿ ಪದ್ಧತಿ ಮಾದರಿಯಾಗಿ ತೆಗೆದುಕೊಳ್ಳಬೇಕು‘ ಎಂದು ತಾಲ್ಲೂಕು ಕೃಷಿ ಅಧಿಕಾರಿ ಸಂದೀಪ್ ತಿಳಿಸಿದರು.

ಸಮಗ್ರ ಕೃಷಿ ಬೆಳೆ ಬೆಳೆದಿರುವುದು
ಸಮಗ್ರ ಕೃಷಿ ಬೆಳೆ ಬೆಳೆದಿರುವುದು
ಸಮೃದ್ಧಿಯಾಗಿ ಬೆಳೆದಿರುವ ಮಲ್ಲಿಗೆ ಹೂವು
ಸಮೃದ್ಧಿಯಾಗಿ ಬೆಳೆದಿರುವ ಮಲ್ಲಿಗೆ ಹೂವು
ಮಲ್ಲಿಗೆ ಹೂವಿನ ರಾಶಿ
ಮಲ್ಲಿಗೆ ಹೂವಿನ ರಾಶಿ
ಆಡು ಕುರಿಗಳ ಸಾಕಾಣಿಕೆ
ಆಡು ಕುರಿಗಳ ಸಾಕಾಣಿಕೆ
ತಾವೇ ಬೆಳೆದ ಹಸುವಿನ ಮೇವು
ತಾವೇ ಬೆಳೆದ ಹಸುವಿನ ಮೇವು
ಇಲಾಖೆ ವತಿಯಿಂದ ಸಬ್ಸಿಡಿ ರೂಪದಲ್ಲಿ ಪಡೆದಿರುವ ಟಿಲ್ಲರ್ ಮತ್ತು ಯಂತ್ರೋಪಕರಣಗಳು
ಇಲಾಖೆ ವತಿಯಿಂದ ಸಬ್ಸಿಡಿ ರೂಪದಲ್ಲಿ ಪಡೆದಿರುವ ಟಿಲ್ಲರ್ ಮತ್ತು ಯಂತ್ರೋಪಕರಣಗಳು
ಪ್ರಶಸ್ತಿಗಳೊಂದಿಗೆ ಶಿವಲಿಂಗಯ್ಯ
ಪ್ರಶಸ್ತಿಗಳೊಂದಿಗೆ ಶಿವಲಿಂಗಯ್ಯ
ತಾಲೂಕು ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರವಿಕುಮಾರ್ ಯು.ಎಚ್
ತಾಲೂಕು ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ರವಿಕುಮಾರ್ ಯು.ಎಚ್

ಕುಟುಂಬದ ಪ್ರತಿಯೊಬ್ಬರು ನನ್ನೊಂದಿಗೆ ಕೈಜೋಡಿಸಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ. ಅದರಂತೆ ಕೃಷಿ ಇಲಾಖೆಯ ಅಧಿಕಾರಿಗಳು ಹೆಚ್ಚು ಸಹಕರಿಸಿದ್ದಾರೆ. ಇಲಾಖೆಯಿಂದ ರೈತರಿಗೆ ದೊರೆಯುವ ಎಲ್ಲಾ ಸೌಲಭ್ಯಗಳ ಒದಗಿಸಿ ಕೊಟ್ಟಿದ್ದಾರೆ.

– ಶಿವಲಿಂಗಯ್ಯ ಪ್ರಗತಿಪರ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT